

ತುಮಕೂರು: ತಿಪಟೂರಿನ ಶಾರದಾನಗರದ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ರಾತ್ರಿ ಸಮಯದಲ್ಲಿ ಮುಸುಕುಧಾರಿ ಕಳ್ಳ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಿರಣ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ನ್ನ ಕೈಚಳಕದಿಂದ ಹ್ಯಾಂಡಲ್ ಲಾಕ್ ತೆಗೆದು ಕಳ್ಳತನ ಮಾಡಿರುವ ಘಟನೆ ನಸುಕಿನಲ್ಲಿ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.