ಅನಧಿಕೃತ ಆಟೋಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಒ ಇನ್ಸ್‌ಪೆಕ್ಟರ್

07TMK_AUTO
Published on

ತುಮಕೂರು: ದಾಖಲೆಗಳಿಲ್ಲದೆ ನಗರದ ರಸ್ತೆಗಳಿಯುತ್ತಿರುವ ಆಟೋಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಬಿಸಿಮುಟ್ಟಿಸಿದೆ.

ಸಾರಿಗೆ ಇಲಾಖೆ ಇನ್ಸ್‌ಪೆಕ್ಟರ್ ಎಚ್.ಸದ್ರುಲ್ಲಾ ಶರೀಪ್ ರಸ್ತೆಗಳಿದ್ದು ಅನಧಿಕೃತವಾಗಿ ಸಂಚರಿಸುತ್ತಿದ್ದ ಎಲï‌ಪಿಜಿ ಹಾಗೂ ಪೆಟ್ರೋಲ್ ಬಳಕೆಯ 17 ಆಟೋಗಳನ್ನು ವಶಪಡಿಸಿಕೊಂಡರು.

17 ಆಟೋಗಳ ಪೈಕಿ ಎಫ್‌ಸಿ, ವಿಮೆ, ಪರ್ಮಿಟ್ ಇಲ್ಲದ ಹಾಗೂ ಸರಿಯಾದ ಮೀಟರ್ ಇಲ್ಲದ 16 ಆಟೋಗಳನ್ನು ವಶಪಡಿಸಿಕೊಂಡರು. ಮೂಲದಾಖಲೆಗಳು ಸಮರ್ಪಕವಾಗಿದ್ದ ನೀಡಿದ ಒಂದು ಆಟೋವನ್ನು ಬಿಡುಗಡೆ ಮಾಡಲಾಯಿತು.

ತುಮಕೂರಿನಿಂದ ವರ್ಗಾವಣೆಯಾದ ಆಟೋಗಳು ಜಿಲ್ಲೆಯ ಹೊರಗೆ ಹೋಗದೆ ಇಲ್ಲೇ ಕಾರ್ಯಪ್ರವೃತಾವಾಗಿವೆ ಎಂಬ ಆಟೋರಿಕ್ಷಾದ ವಿವಿಧ ಸಂಘಟನೆಯ ದೂರಿನನ್ವಯ ಈ ಕಾರ್ಯಚರಣೆ ನಡೆದಿದೆ ಎಂದು ಶರೀಫ್ `ವಿಜಯವಾಣಿ'ಗೆ ತಿಳಿಸಿದರು.

ಆಟೋಗಳು ರಸ್ತೆಗಿಳಿಯುವ ಮೊದಲು ಸೂಕ್ತ ಮೂಲದಾಖಲೆ ಮತ್ತು ಸರಿಯಾದ ಮೀಟರ್ ಅಳವಡಿಕೆ ಮಾಡಬೇಕು. ಪ್ರತಿನಿತ್ಯ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಿ ಅವರಿಗೆ ಅನಾನುಕೂಲ ಮಾಡುತ್ತಿರುವ ಆಟೋಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net