

ತುಮಕೂರು: ಬಯಲು ಸೀಮೆಯ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ವಿಜೆಎನ್ಎಲ್ ವತಿಯಿಂದ ರೂಪಿಸಿರುವ ಅಕ್ವಡಿಕ್ಟ್ ಏಷ್ಯದಲ್ಲಿಯೇ ಗಮನ ಸೆಳೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಯುಕೆಪಿ ನೀರಾವರಿ ಯೋಜನೆಯಲ್ಲಿ 500 ಕ್ಯೂಸೆಕ್ ಸಾಮಾರ್ಥ್ಯದ 12ಕಿಮೀ ಅಕ್ವಡೆಕ್ಟ್ ಮಾಡಿದ್ದೇವೆ, ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ಜಿಲ್ಲೆಯಲ್ಲಿ 10 ಕಿಮೀ ಎರಡು ಲೈನ್ ನಲ್ಲಿ 3600 ಕ್ಯೂಸೆಕ್ ನೀರು ಹರಿಯಲಿದೆ. ಚೀನಾದಲ್ಲಿಯೂ 11ಕಿಮೀ ಇದೆ ಆದರೆ ಅದು 40 ಅಡಿ ಎತ್ತರದಲ್ಲಿ ನಮ್ಮದು 129 ಅಡಿ ಎತ್ತರದಲ್ಲಿದೆ ಎಂದರು.
ತುಮಕೂರು ಜಿಲ್ಲೆಯ ಚೇಳೂರು ಭಾಗದಲ್ಲಿರುವ ಅಕ್ವಡೆಕ್ಟ್ 4.75 ಮೀ. ಅಗಲ, 20 ಎತ್ತರದಲ್ಲಿದ್ದು ಸುತ್ತಲಿನ ತೆಂಗಿನತೋಟ ವೀಕ್ಷಿಸಲು ನಯನ ಮನೋಹರವಾಗಿದೆ, ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಬೇಕಿದೆ ಎಂದರು.
ನಾಲೆ ಕಾಮಗಾರಿಗೆ 55000 ಮೆಟ್ರಿಕ್ ಟನ್ ಕಬ್ಬಿಣ ಹಾಗೂ ಬರೋಬ್ಬರಿ 4 ಲಕ್ಷ ಕ್ಯೂಬಿಕ್ ಮೀಟರ್ ಕಾಂಕ್ರಿಟ್ ಬಳಸಲಾಗಿದೆ, 10 ಕಿಮೀ ಅಕ್ವಡೆಕ್ಟ್ ನಿಮಾರ್ಣಕ್ಕೆ 1300 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಪೂರೈಸುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸಲು 3 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಭೈರಗೊಂಡ್ಲು ಬಳಿ ಜಲಸಂಗ್ರಹಗಾರ ನಿರ್ಮಿಸಲಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಜತೆ ಇದ್ದ ತಕರಾರು ಪರಿಹರಿಸಲಾಗಿದ್ದು ಶ್ರೀದಲ್ಲಿಯೇ ಐತಿಹಾಸಿಕ ಎತ್ತಿನಹೊಳೆ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ. ಡಿ.ಕೆ.ಶಿವಕುಮಾರ್ ಬೃಹತ್ ನೀರಾವರಿ ಸಚಿವ