ಶಿಕ್ಷಕರ ಬಡ್ತಿ ಪಟ್ಟಿ ಪ್ರಕಟ; ಆಕ್ಷೇಪಣೆಗಳಿದ್ದರೆ ಬಿಇಒಗೆ ಸಲ್ಲಿಸಲು ಅವಕಾಶ

schoold education
Published on

ತುಮಕೂರು: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಮುಖ್ಯಶಿಕ್ಷಕರಿಗೆ ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಸಂಬAಧ ತಾತ್ಕಾಲಿಕ ಅಂತಿಮ ಜೇಷ್ಠತಾ ಪಟ್ಟಿ ಆಯಾ ತಾಲೂಕು ಬಿಇಒ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

2023-24 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಶಿಕ್ಷಕರುಗಳಿಗೆ ಹಾಗೂ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯಶಿಕ್ಷಕರ ವಂದಕ್ಕೆ ಬಡ್ತಿ ನೀಡುವ ಸಂಬAಧ ಮಾನ್ಯ ಆಯುಕ್ತರಿಂದ ಅಧಿಕೃತ ಜ್ಞಾಪನ ಪ್ರಕಟಿಸಲಾಗಿದೆ.

ಪಟ್ಟಿಯನ್ನು ಯಾವುದಾದರೂ ಅರ್ಹ ಶಿಕ್ಷಕರ ಹೆಸರು ಬಿಟ್ಟುಹೋಗಿದ್ದಲ್ಲಿ ಅಥವಾ ಹೆಸರು ತಿದ್ದುಪಡಿ, ಜೇಷ್ಠತೆ, ಜನ್ಮದಿನಾಂಕ, ಸೇವೆಗೆ ಸೇರಿದ ದಿನಾಂಕ, ಮುಖ್ಯ ಶಿಕ್ಷಕರಾಗಿ ಶಾಲಾ ಕರ್ತವ್ಯಕ್ಕೆ ಹಾಜರಾದ ದಿನಾಂಕ, ಹಾಗೂ ಇತರೆೆ ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ ಆ.23ರೊಳಗೆ ಬಿಇಒಗೆ ಸಲ್ಲಿಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net