

ತುಮಕೂರು: ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಏ.15 ರಿಂದ ಆರಂಭವಾಗಿದ್ದು ಮೇ.15ರ ವರೆಗೆ ನಡೆಯಲಿದೆ .
ವರ್ಗಾವಣೆ ಬಯಸುವ ಶಿಕ್ಷಕರು ಇಇಡಿಎಸ್ ಮೂಲಕ ಮೇ.15ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ವರ್ಗಾವಣೆಗೆ ಸಂಬAಧಿಸಿದ ಹೆಚ್ಚಿನ ಮಾಹಿತಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಹಂತದಲ್ಲಿ ವರ್ಗಾವಣೆ ಕೋಶ ರಚಿಸಲಾಗಿದ್ದು, ಸಂಬAಧಪಟ್ಟ ಶಿಕ್ಷಕರು ವರ್ಗಾವಣೆ ಕೋಶದ ಅಧಿಕಾರಿಗಳ ದೂರವಾಣಿಗೆ ಕರೆ ಮಾಡುವ ಮೂಲಕ ತಮ್ಮ ಸಂದೇಹ ಬಗೆಹರಿಸಿಕೊಳ್ಳಬಹುದು.
ಮಾಹಿತಿಗೆ ವರ್ಗಾವಣೆ ಉಪನಿರ್ದೇಶಕ 9448999352, ಶಿಕ್ಷಣ ಅಧಿಕಾರಿ ಎ.ಟಿ. ರಂಗದಾಸಪ್ಪ 9449126869, ಪತ್ರಾಂಕಿತ ಸಹಾಯಕ ಮುನಿರಾಜು 9481885864 ಹಾಗೂ ಅಧೀಕ್ಷಕ ಯೋಗಾನಂದ 9886479184 ಸಂಪರ್ಕಿಸಿ.