ವಿದ್ಯಾರ್ಥಿನಿಗೆ ಲವ್ಯೂ ಎಂದು ದೌರ್ಜನ್ಯವೆಸಗಿದ ಶಿಕ್ಷಕನ ಬಂಧನ

TRRR
Published on

ಮಧುಗಿರಿ : 10 ನೇ ತರಗತಿಯ ವಿದ್ಯಾರ್ಥಿನಿಗೆ ಐ ಲವ್ ಯೂ ಎಂದು ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನನ್ನು ಬಂದಿಸಿ ನ್ಯಾಂಯಾಂಗದ ವಶಕ್ಕೆ ನೀಡಿರುವ ಘಟನೆ ನಡೆದಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ಸರ್ಕಾರಿ ಫ್ರೌಢಶಾಲೆಯ ಸಾಸಲುಕುಂಟೆಯ ಸಹ ಶಿಕ್ಷಕ ಪಿ. ನಾಗಭೂಷಣ್ ಬಂದಿತ ಶಿಕ್ಷಕ.

ಇವರು ಈ ಹಿಂದೆ ಮಧುಗಿರಿ ತಾಲೂಕಿನ ಕೊಡಗಾರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ
ಈ ಶಾಲೆಯಲ್ಲಿ ವಿದ್ಯಾರ್ಥಿನಿಯು 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಈ ಶಾಲೆಯ ವಿದ್ಯಾರ್ಥಿನಿಯೊಂದಿಗೆ ಗೌರವಯುತವಾಗಿ ವರ್ತಿಸದೆ, ಸದರಿ ಶಿಕ್ಷಕ ಆಮಿಷ ತೋರಿ, ಕೈ ಬಳೆ ತೊಡಿಸಿ, ಕೈ ಹಿಡಿದು ಎಳೆದಾಡಿ ಮುತ್ತು ನೀಡಿರುತ್ತಾರೆ.

ಇದಲ್ಲದೇ ಇವರು ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ವಾಸವಿದ್ದಾಗ, 2 ಬಾರಿ ಬಡವನಹಳ್ಳಿಯಲ್ಲಿ ಬೇರೆ ಕಡೆ ಕರೆದು ಐ ಲವ್ ಯು ಎಂದು ಒತ್ತಾಯ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದೇ ಕಾರಣಕ್ಕೆ ಅಮಾನತ್ತಾಗಿ ನಂತರ ಪಾವಗಡ ತಾಲೂಕಿನ ಸಾಸಲುಕುಂಟೆಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು.

ಆದರೆ ಶಿಕ್ಷಕರ ವಿರುದ್ದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಇವರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಸದರಿ ಶಿಕ್ಷಕರ ವಿರುದ್ಧ ಏನು ಕ್ರಮ ಆಗಿಲ್ಲದೆ ಇರುವುದರಿಂದ ಗ್ರಾಮದ ಕೆಲವರು ನಮ್ಮ ಮಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಆದ್ದರಿಂದ ಸದರಿ ಶಿಕ್ಷಕರ ವಿರುದ್ಧ ಪೋಕ್ಸ್ ಕಾಯ್ದೆ 2012 ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ತಾಯಿ ಬಡವನಹಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂದಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ತುಮಕೂರು ಜಿಲ್ಲಾ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಶಿಕ್ಷಕ ನಾಗಭೂಷಣ್ ಅಮಾನತು:

ಶಿಕ್ಷಕ ನಾಗಭೂಷಣ್ ಬಂಧನದ ಹಿನ್ನೆಲೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಾಗಿದ್ದು, ಇವರ ಈ ನಡವಳಿಕೆಗಳು ಜವಾಬ್ದಾರಿಯುತ ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆಗಳಾಗಿರುತ್ತದೆ. ಶಿಕ್ಷಕ ಪಿ. ನಾಗಭೂಷಣ್ ರವರ ದುವರ್ತನೆಯಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅದು ನಮ್ಮ ಮುಂದಿನ ಪ್ರಜೆಗಳಾದ ವಿದ್ಯಾರ್ಥಿ ಸಮುದಾಯದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾದ್ಯತೆಗಳು ಇರುವುದರಿಂದ ಮೇಲಿನ ಎಲ್ಲಾ ವರದಿಗಳಲ್ಲಿನ ಆರೋಪಗಳು ಮೇಲ್ನೋಟಕ್ಕೆ ನೈಜವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ಶಿಕ್ಷಕರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಲು ನಿರ್ಣಯಿಸಿ ಇವರ ಮೇಲಿನ ಆರೋಪದ ಬಗ್ಗೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಆಮಾನತ್ತು ಮಾಡಿ ಡಿಡಿಪಿಐ ಎಂ.ಆರ್. ಮಂಜುನಾಥ್ ಆದೇಶಿಸಿದ್ದಾರೆ.

ಮಧುಗಿರಿ ತಾಲೂಕಿನ ಮೂರು ಶಾಲೆಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಶಿಕ್ಷಕರು ಲೈಂಗಿಕ ದೌರ್ಜನ್ಯ ವೆಸಗಿದ್ದು, ಪೋಷಕರುಗಳೇ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ ಸಹ ಕೆಲ ದಿನಗಳು ಅಮಾನತ್ತಾಗಿ ನಂತರ ದಿನಗಳಲ್ಲಿ ಆಯಾ ಕಟ್ಟಿನ ತಾಲೂಕುಗಳನ್ನು ಬದಲು ಮಾಡಿಕೊಂಡು ಇತರೆ ಭಾಗಗಳಿಗೆ ವರ್ಗಾವಣೆ ಮಾಡಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಮೂರು ಪ್ರಕರಣಗಳು ಇದ್ದು, ಅವರಿಗೆ ಶಿಕ್ಷೆ ಯಾವಾಗ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net