ಎಸ್‌ಪಿಎಂ ವಿರೋಧಿಸಿ, ಮಗನಿಗೆ ಟಿಕೆಟ್ ಕೇಳಿದ ಟಿಬಿಜೆ!

tb jayachandra
Published on

ತುಮಕೂರು: ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ವಾಪಸಾಗುವುದನ್ನು ವಿರೋಧಿಸಿರುವ ಟಿ.ಬಿ.ಜಯಚಂದ್ರ , ತಮ್ಮ ಪುತ್ರ ಟಿ.ಜೆ.ಸಂಜಯ್‌ಗೆ ತುಮಕೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಗೆ ರಾಜೀನಾಮೆ ನೀಡದೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತೇನೆ ಎಂದರೆ ಏನರ್ಥ? ಆಯರಾಮ್, ಗಯಾರಾಮ್ ವ್ಯಕ್ತಿಗಳಿಗೆ ಜನರು ನಂಬುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಮ್ಮಲ್ಲಿಯೇ ಸಾಕಷ್ಟು ಜನರು ಸಮರ್ಥರು ಇದ್ದಾರೆ ಅವರಿಗೆ ಅವಕಾಶ ಸಿಗಬೇಕು.ಇಲ್ಲಿಂದನೋ ಕರೆದುಕೊಂಡು ಬರುವ ಅವಶ್ಯಕತೆ ಇಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.

ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಎಷ್ಟು ಸರಿ ಬಂದ್ರು, ಎಷ್ಟು ಸರಿ ವಾಪಸ್ಸು ಹೋದ್ರು, ಮುಂದೆಯೂ ಹೋಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಬಿಟ್ರೆ ಬೇರೆ ಇಲ್ಲ ಅಂತಿದೊರು ಈಗ ಯಾವ ಮುಖ ಇಟ್ಕೊಂಡು ಕಾಂಗ್ರೆಸ್‌ಗೆ ಬರುತಿದ್ದಾರೆ ಎಂದು ಮೊದಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net