ತಲ್ವಾರ್​ನಲ್ಲಿ ಕೇಕ್​ ಕತ್ತರಿಸಿದ್ದವರು ಅಂದರ್​

CK
Published on

ತುಮಕೂರು: ಗುಬ್ಬಿ ಪಟ್ಟಣದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಜನರಲ್ಲಿ ಭಯ ಮೂಡಿಸಿದ್ದ ಸೈಯದ್​ ಶರೂಖ್​(26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಅ.12ರಂದು ಗುಬ್ಬಿ ಸಂತೇ ಮೈದಾನದಲ್ಲಿ ರಾತ್ರಿ 10.30ರ ಸಮಯದಲ್ಲಿ ಸೈಯದ್​ ಶರೂಖ್​ ಮತ್ತು ಮುಕೀಶ್​ ಪಾಷ್​ ತಲ್ವಾರ್​ಗಳನ್ನು ತೋರಿಸಿ ವಿಚಿತ್ರವಾಗಿ ಜನರಲ್ಲಿ ಭಯ ಮೂಡಿಸಿದ್ದ ವೀಡಿಯೋ ವೈರಲ್​ ಆಗಿದ್ದ ಬೆನ್ನಹಿಂದಲೇ ಪೊಇಲೀಸರು ಕ್ರಮಕೈಗೊಂಡಿದ್ದಾರೆ.


ವಿಚಿತ್ರವಾಗಿ ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಜನರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಲ್ವಾರ್​ ತೆಗೆದುಕೊಂಡು ರಸ್ತೆಗೆ ಅಡ್ಡಲಾಗಿ ತಲ್ವಾರ್​ ನಿಂದ ಸೈಯದ್​ ಶರೂಖ್​ ಕಿರುಚಿ, ಜೋರಾಗಿ ಚೀರಾಡಿಕೊಂಡು ಕೇಕ್​ ಕತ್ತರಿಸಿದ್ದ ದೃಶ್ಯ ವೈರಲ್​ ಆಗಿತ್ತು. ತಲೆ ಮರೆಸಿಕೊಂಡಿರುವ ಮುಕೀಶ್​ ಪಾಷ್​ ಬಂಧನಕ್ಕೆ ಬಲೆ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net