

ತುಮಕೂರು: ನಗರದ ಚಿಕ್ಕಪೇಟೆ ಶ್ರೀವ್ಯಾಸರಾಜರ ಮಠದಲ್ಲಿ ಶ್ರೀಪವನ ವಿಜಯ ಸೇವಾ ಸಮಿತಿ 13ನೇ ವಾರ್ಷಿಕೋತ್ಸವದ ಅಂಗವಾಗಿ ನೆಡೆಯುತ್ತಿರುವ ಶ್ರೀಮದ್ಭಾಗವತ ಮಹಾಪುರಾಣ ಮಹಾಯಾಗ ಹಾಗೂ ದಶಲಕ್ಷ ನವಗ್ರಹ ಸ್ತೋತ್ರ ಪಾರಾಯಣಗಳ ಸಮರ್ಪಣಾ ಮಹೋತ್ಸವಕ್ಕೆ ಆಗಮಿಸಿದ ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶ ತೀರ್ಥರು, ಮುಳುಬಾಗಿಲು ಶ್ರೀಪಾದರಾಜ ಮಠದ ಶ್ರೀಸುಜಯನಿಧಿ ತೀರ್ಥರು ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಬಳಿಯಿಂದ ಸ್ವಾಗತಿಸಲಾಯಿತು.