

ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಬಳಿ ನೂತನವಾಗಿ ನಿಮಾರ್ಣ ಮಾಡುವ 110/11ಕೆವಿ ಉಪಸ್ಥಾವರಕ್ಕೆ ಮಾ.7 ಅಥವಾ ನಂತರ ಹಾಲಿ ಇರುವ 110ಕೆವಿ ನಿಟ್ಟೂರು-, ಕೆ.ಜಿ.ಟೆಂಪಲ್ ಏಕಮುಖ ವಿದ್ಯುತ್ ಮಾರ್ಗದಿಂದ 5.771 ಕಿಮೀ ಉದ್ದದ ದ್ವಿಮುಖ ಗೋಪುರಗಳ ಮೇಲೆ ಲಿಲೋ ವಿದ್ಯುತ್ ಮಾರ್ಗ ವಿದ್ಯುದ್ದೀಕರಣಗೊಳಿಸಲಾಗುತ್ತಿದೆ.
ಸಾರ್ವಜನಿಕರು ಈ ಉಪಸ್ಥಾವರದ ಗೋಪುರ ಹತ್ತುವುದು, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ, ಮತ್ತಿತರ ವಸ್ತುಗಳನ್ನು ಪ್ರಸರಣ ಮಾರ್ಗಕ್ಕೆ ಎಸೆಯುವುದು, ದನ-ಕರು ಮತ್ತಿತರ ಜಾನುವಾರುಗಳನ್ನು ವಿದ್ಯುತ್ ಗೋಪುರಕ್ಕೆ ಕಟ್ಟುವುದನ್ನು ನಿರ್ಬಂಧಿಸಲಾಗಿದೆ.
ಪ್ರಸರಣ ಮಾರ್ಗ ಜಿಲ್ಲೆಯ ಗುಬ್ಬಿ ತಾಲೂಕು ಕಸಬಾ ಹೋಬಳಿ ಸುರಿಗೇನಹಳ್ಳಿ ಕಾವಲ್, ಕೊನೆಮಾದೇನಹಳ್ಳಿ, ಕಟ್ಟಿಗೇನಹಳ್ಳಿ ಮತ್ತು ಜಿ. ಹೊಸಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿದೆ.