ತೋಟಗಾರಿಕೆ ರೈತರಿಗೆ ಸಹಾಯಧನ

horticulture
Published on

ತುಮಕೂರು: ತೋಟಗಾರಿಕೆ ಇಲಾಖೆ ರೈತರು ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಿದೆ. ಅಡಕೆ ಸುಲಿಯುವ ಯಂತ್ರ, ದೋಟಿ, ಬ್ರಷ್​ ಕಟರ್​, ಟಿಲ್ಲರ್​, ಪವರ್​ ವೀಡರ್​, ಸ್ಪ್ರೇಯರ್​, ರೋಟೋವೇಟರ್​, ಡಿಗ್ಗರ್​ ಹಾಗೂ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ಹಾಗೂ ಉದ್ದಿಮೆದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್​ಬಂದಿ, ಆಧಾರ್​, ಬ್ಯಾಂಕ್​ ಪಾಸ್​ ಪುಸ್ತಕ, ಜಾತಿ ಪ್ರಮಾಣಪತ್ರ(ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ, ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಸೇರಿದಂತೆ ಮತ್ತಿತರೆ ದಾಖಲಾತಿ ಲಗತ್ತಿಸಿ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ ಅಥವಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.

ಮಾಹಿತಿಗೆ ತುಮಕೂರು 9686503500, ಗುಬ್ಬಿ- 9535781963, ಶಿರಾ- 9844042356, ಕುಣಿಗಲ್​- 9606570210, ತಿಪಟೂರು-9845014293, ಚಿಕ್ಕನಾಯಕನಹಳ್ಳಿ- 9686056705, ಮಧುಗಿರಿ- 9916378199, ತುರುವೇಕೆರೆ- 9448416334, ಕೊರಟಗೆರೆ- 9448001644 ಹಾಗೂ ಪಾವಗಡ- 9448448970 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net