ಗ್ರಾಪಂ ಸ್ವಚ್ಛವಾಹಿನಿಯಲ್ಲಿ ಸಮವಸ್ತ್ರಧಾರಿ ವಿದ್ಯಾರ್ಥಿಗಳು; ಪಿಡಿಒ ನೋಟಿಸ್‌ಗೆ ಉತ್ತರವಾಗಿ ಕ್ಷಮಾಪಣ ಪತ್ರ

2HULIYAR1111
Published on

ತುಮಕೂರು: ಗ್ರಾಪಂ ಕಸ ಸಾಗಿಸುವ ವಾಹನದಲ್ಲಿ ಶಾಲೆಗೆ ಬರುವ ಮಕ್ಕಳನ್ನು ತುಂಬಿಸಿಕೊಂಡು ಬಂದಿರುವ ವೀಡಿಯೋ ವೈರಲ್ ಆಗಿದ್ದು, ಮಕ್ಕಳ ಆರೋಗ್ಯದ ಜತೆ ಗ್ರಾಪಂ ಚೆಲ್ಲಾಟವಾಡುತ್ತಿದೆ ಎಂದು ನಾಗರೀಕರು ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬರಕನಾಳು ಗ್ರಾಪಂಗೆ ಸೇರಿದ ಕಸದ ಆಟೋದಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವಾಹನದ ಸಿಬ್ಬಂದಿ ಪರವಾಗಿಯೂ ಕೆಲವರು ಮಾತನಾಡಿದ್ದಾರೆ.

ವಿಷಯ ತಿಳಿದ ಗ್ರಾಪಂ ಪಿಡಿಒ ತೂಕ್ಯಾನಾಯಕ ಆಟೋ ಚಾಲಕಿಗೆ ನೋಟಿಸ್ ನೀಡಿದ್ದು, ತಪ್ಪು ಅರಿತ ಚಾಲಕಿ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದು ಪ್ರಕರಣ ತಣ್ಣಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net