

ತುಮಕೂರು: ಕೊರಟಗೆರೆ ತಾಲೂಕು ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಕುನಿತಿಮ್ಮನಹಳ್ಳಿ ಗ್ರಾಮದ ರಮೇಶ್ ಎಂಬುವವರ ಪುತ್ರ ಅಭಿಲಾಷ್(14) ಮಧ್ಯಾಹ್ನದ ಊಟದ ಬಳಿಕ ಅಸ್ವಸ್ಥಗೊಂಡು ತರಗತಿಯಲ್ಲಿಯೇ ಸಾವಿಗೀಡಾಗಿದ್ದಾನೆ.
ಸೋಮವಾರ ಮಧ್ಯಾಹ್ನ ಶಾಲೆಯಲ್ಲಿ ಮಧ್ಯಾಹ್ನ ಊಟ ಸೇವಿಸಿದ ಬಳಿಕ ತರಗತಿಗೆ ತೆರೆಳಿದ ಅಭಿಲಾಷ್ಗೆ ಸೂಕ್ತಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಕೂಡ ಲಭಿಸದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಶಾಲೆಯ ಪ್ರಾಚಾರ್ಯ ವಿನೋದ್ ಯಾದವ್ ಹಾಗೂ ವಾರ್ಡನ್ ಮಂಜುನಾಥ್ ರ್ನಿಲಕ್ಷ್ಯ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಪಾಲಕರು ದೂರಿದ್ದಾರೆ.