

ತುಮಕೂರು: ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ಪುಷ್ಪ ಹರಾಜು ಕೇಂದ್ರದಲ್ಲಿ ಖಾಲಿ ಇರುವ 6 ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ನಿಗಧಿಗೊಳಿಸಿ ಲಾಟರಿ, ಜೇಷ್ಠತೆ ಮೂಲಕ ಹಂಚಿಕೆ ಮಾಡಲು ಅರ್ಹ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಳಿಗೆಯ ಮಾಸಿಕ 1000 ರೂ.ಗಳ ಬಾಡಿಗೆ ನಿಗಧಿಪಡಿಸಲಾಗಿದೆ. ಹರಾಜು ಕೇಂದ್ರದಲ್ಲಿ ಮಳಿಗೆ ಸಂಖ್ಯೆ 2, 3, 4, 7, 14 ಮತ್ತು 15 ಸೇರಿದಂತೆ 6 ಮಳಿಗೆಗಳು ಖಾಲಿಯಿದ್ದು, ಮಳಿಗೆಯಲ್ಲಿ ಹೂವಿನ ವಹಿವಾಟು ನಡೆಸಲು ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ.
ಅರ್ಹ ವ್ಯಾಪಾರಸ್ಥರು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 11 ರಿಂದ 19ರ ವರೆಗೆ ಸಹಾಯಕ ತೋಟಗಾರಿಕೆ ನಿರ್ದೇಶಕ, ಪುಷ್ಪ ಹರಾಜು ಕೇಂದ್ರ, ಚಿಕ್ಕನಹಳ್ಳಿ ಇವರಿಗೆ ಸಲ್ಲಿಸಬಹುದು.