ಹಣಕ್ಕಾಗಿ ಮಗನಿಂದಲೇ ತಂದೆಯ ಕೊಲೆ

Crime_20250427000801999.jpg
Published on

ತುರುವೇಕೆರೆ: ಹಣಕಾಸಿನ ವಿಚಾರಕ್ಕಾಗಿ ಮಗ ಹಾಗೂ ತಂದೆ ನಡುವೆ ಆರಂಭವಾದ ಜಗಳ ತಂದೆಯ ಕೊಲೆಯೊಂದಿಗೆ ಅಂತ್ಯವಾಗಿದೆ. ಮಗನೇ ತಂದೆಯ ಕತ್ತು ಹಿಸುಕಿ ಕೊಂದಿರುವ ಘಟನೆ ತುರುವೇಕೆರೆತಾಲೂಕು ದಬ್ಬೇಘಟ್ಟ ಹೋಬಳಿ ಕೆ.ಬೇವಿನಹಳ್ಳಿ ಭಾನುವಾರ ರಾತ್ರಿ ನಡೆದಿದೆ.

ಕೆ.ಬೇವಿನಹಳ್ಳಿಯಲ್ಲಿ ನಿವಾಸಿ ಚಂದ್ರೇಗೌಡ(65) ಕೊಲೆಯಾದವರು, ಇವರ ಮಗ ಶಿವರಾಜು(40) ಕೊಲೆಗೈದವನು. ಚಂದ್ರೇಗೌಡನ ಹೆಂಡತಿ ಕಳೆದ ಐದಾರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಒಬ್ಬನೇ ಗ್ರಾಮದಲ್ಲಿ ವಾಸವಿದ್ದನು. ಮಗ ಶಿವರಾಜು ಆತನ ಪತ್ನಿ ಮತ್ತು ಮಗನ ಜತೆ ಬೆಂಗಳೂರಿನಲ್ಲಿ ವಾಸವಿದ್ದರು. ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು.

ಚಂದ್ರೇಗೌಡ ಈಚೆಗೆ ತನಗಿದ್ದ ಸೈಟ್ ಒಂದನ್ನು ಲಕ್ಷಾಂತರ ರೂ,ಗೆ ಮಾರಿದ್ದನು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮದ ಹಬ್ಬಕ್ಕೆ ಬಂದಿದ್ದ ಮಗ ಸೈಟ್ ಮಾರಿದ ಹಣ ನೀಡುವಂತೆ ಕೇಳಿ ತಂದೆಯೊಂದಿಗೆ ಜಗಳವಾಡಿದ್ದಾನೆ.ನಂತರ ಆರೋಪಿ ಶಿವರಾಜು ತನ್ನ ಹೆಂಡತಿ, ಮಗನ್ನು ಬೆಂಗಳೂರಿಗೆ ಕಳುಹಿಸಿ ಒಬ್ಬನೇ ಮನೆಯಲ್ಲಿ ಇದ್ದನು. ಭಾನುವಾರ ರಾತ್ರಿ ಮತ್ತೆ ಹಣಕಾಸಿನ ಸಂಬಂಧ ತಂದೆ, ಮಗನ ನಡುವೆ ಜಗಳವಾಗಿ ಮಾತು ಅತಿರೇಕಕ್ಕೆ ಹೋಗಿ ಶಿವರಾಜು ತನ್ನ ತಂದೆಯನ್ನು ಕತ್ತುಹಿಸುಕಿ ಕೊಂದಿದ್ದಾನೆ.

ಸೋಮವಾರ ಬೆಳಗ್ಗೆ ತನಗೆ ಏನೂ ಗೊತ್ತಿಲ್ಲವೆಂಬಂತೆ ಶಿವರಾಜು ತನ್ನ ತಂದೆ ಸಾವಿನ ವಿಚಾರವನ್ನು ಮನೆಯ ಅಕ್ಕಪಕ್ಕದವರು, ಸಂಬಂಧಿಕರಿಗೆ ಮುಟ್ಟಿಸಿದ್ದಾನೆ. ಶವ ಸಂಸ್ಕಾರಕ್ಕೆ ಮುಂದಾದ ವೇಳೆ ಗ್ರಾಮದ ಕೆಲವರಿಗೆ ಚಂದ್ರೇಗೌಡರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪಟ್ಟಣದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net