ದೇಶಕ್ಕೆ ನರೇಂದ್ರಮೋದಿ ಅಗತ್ಯವಿದೆ, ಯಾರ ಒತ್ತಡಕ್ಕೂ ಮಣಿಯಲ್ಲ; ವಿ.ಸೋಮಣ್ಣ ಸ್ಪಷ್ಟನೆ

SOMANNA
Published on

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ನಂತರ ಅಸಮಧಾನಗೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯ ವದಂತಿಗಳಿಗೆ ಫುಲ್‌ಸ್ಟಾಪ್ ಹಾಕಿದ್ದು ಬಿಜೆಪಿಯಲ್ಲಿಯೇ ಮುಂದುವರಿಯುವ ಮಾತನಾಡಿದ್ದಾರೆ.

ನಗರದ ಹನುಮಂತಪುರದ ಶ್ರೀಕೋಟೆ ಕೋಲ್ಲಾಪುರದಮ್ಮ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಲಕ್ಷದೀಪೋತ್ಸವ ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ವೈಮನಸ್ಸು ಸಹಜ, ಸ್ವಪಕ್ಷೀಯರಿಂದ ಆದ ಕೆಟ್ಟ ಅನುಭವ ಹೆಚ್ಚು ದಿನ ಉಳಿಯುವುದಿಲ್ಲ. ಹೈಕಮಾಂಡ್ ಸಮಯ ನೀಡಿದರೆ ಶೀಘ್ರವೇ ದೆಹಲಿಗೆ ತೆರಳಿ ನನ್ನ ನಿರ್ಧಾರವನ್ನು ವರಿಷ್ಠರಿಗೆ ತಿಳಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶಕ್ಕೆ ನರೇಂದ್ರಮೋದಿ ಅವರ ಅವಶ್ಯಕತೆಯಿದೆ, ನನ್ನ ವೈಯುಕ್ತಿಕ ಜೀವನದಲ್ಲಿ ಸೋಮಣ್ಣನಿಂದ ಮೋಸ ಹೋದೆ ಎಂಬುವವರು ಒಬ್ಬರೂ ಇಲ್ಲ. ಬಿಜೆಪಿ ವರಿಷ್ಠರೊಂದಿಗೆ ಮಾತನಾಡಿದ ನಂತರ ನನ್ನ ಅಭಿಪ್ರಾಯವನ್ನು ಜನರಿಗೆ ತಿಳಿಸುತ್ತೇನೆ ಎಂದು ಸಣ್ಣ ಕುತೂಹಲ ಉಳಿಸಿದರು.

ಮೂರು ರಾಜ್ಯಗಳ ಚುನಾವಣೆ ಹಾಗೂ ಸಿಎಂ ಆಯ್ಕೆ ಹಿನ್ನೆಲೆಯಲ್ಲಿ ದೆಹಲಿ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಕರೆ ಬಂದರೆ ದೆಹಲಿಗೆ ಹೋಗುತ್ತೇನೆ ಎಂದರು.

ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ವೈಮನಸ್ಸು ಸಹಜ, ಸ್ವಪಕ್ಷೀಯರಿಂದ ಆದ ಕೆಟ್ಟ ಅನುಭವ ಹೆಚ್ಚು ದಿನ ಉಳಿಯುವುದಿಲ್ಲ. ದೇಶಕ್ಕೆ ನರೇಂದ್ರಮೋದಿ ಅವರ ಅವಶ್ಯಕತೆ ಇದೆ ಹಾಗಾಗಿ, ನಾನು ಯಾರ ಒತ್ತಡಕ್ಕೂ ಮಣಿಯಲ್ಲ. ರಾಜ್ಯದಲ್ಲಿ ಆರು ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದೇನೆ. ಶೀಘ್ರವೇ ದೆಹಲಿಗೆ ಹೋಗಿ ಬಂದ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ.
ವಿ.ಸೋಮಣ್ಣ
ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net