

ತುಮಕೂರು: ಹೆಬ್ಬೂರು ಹೋಬಳಿ ಸಿರಿವರದ ಅರಿವು ಕೇಂದ್ರ ಹಾಗೂ ಗ್ರಾಪಂ ಗ್ರಂಥಾಲಯ ವತಿಯಿಂದ ಸಂವಿಧಾನ ಸಂಭ್ರಮೋತ್ಸವ ಆಚರಣೆ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಎಸ್.ಕೆ.ಕುಮಾರಯ್ಯ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದ ಸಂವಿಧಾನ ವಿಶ್ವಕ್ಕೆ ಪವಿತ್ರವಾಗಿದ್ದು ನಮಗೂ ಕೂಡ ಸಂವಿಧಾನದ ಅರಿವು ಅಗತ್ಯವಾಗಿದೆ. ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಉಪಪ್ರಾಚಾಯೆರ್ ಜಿ.ಟಿ.ಚೇತನ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರು ಹಕ್ಕು ಮತ್ತು ಕಾನೂನು ಅರಿಯಬೇಕು ಗ್ರಾಪಂ ಅರಿವು ಕೇಂದ್ರ ಗ್ರಂಥಾಲಯ ಮಕ್ಕಳ ಸ್ನೇಹಿಯಾಗಿ ಸೇವೆ ನೀಡುತ್ತಿರುವುದು ಹೆಮ್ಮೆಯ ವಿಚಾರ ಮಕ್ಕಳಿಗೆ ಓದಿಗೆ ಪೂರಕವಾಗಿ ಪುಸ್ತಕ, ದಿನ ಪತ್ರಿಕೆ ಹಾಗೂ ಮಕ್ಕಳ ಕ್ರೀಡಾ ಜತೆಗೆ ಸಂಸ್ಕತಿಕ ಚಟುವಟಿಕೆ ಸೇವೆ ಒದಗಿಸುತ್ತಿದ್ದು ಗ್ರಾಮೀಣ ಮಕ್ಕಳು ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ, ಪಂಚಾಯಿತಿ ವತಿಯಿಂದ ಅಗತ್ಯವಾಗಿ ಮೂಲ ಭೂತ ಸವಲತ್ತು ನೀಡುತ್ತಿದ್ದೂ ಮಕ್ಕಳಿಗೆ ಬೇಕಾದ ಕ್ರೀಡಾ ಸಾಮಗ್ರಿ ಕೊಡಿಸಿಕೊಡುವುದಾಗಿ ಹೇಳಿದರು.
ಪಿಡಿಒ ಅಮ್ಜದ್ ಪಾಷ, ಕಾರ್ಯದರ್ಶಿ ಲಿಂಗರಾಜು, ಉಪಾಧ್ಯಕ್ಷ ಮಹಮ್ಮದ್ ಎಜಾಜ್, ಸದಸ್ಯರಾದ ನರಸಿಂಹಮೂರ್ತಿ, ಕೆಂಪಣ್ಣ, ಶಿವರಾಜ್, ಮಲ್ಲಮ್ಮ, ನಾಗೇಶ್, ಗೋವಿಂದರಾಜು, ಲಕ್ಷಿ$್ಮನರಸೇಗೌಡ, ಲೋಕೇಶ್, ಗ್ರಂಥಪಾಲಕ ಎಸ್.ಎಚ್.ಶಿವಮೂರ್ತಿ, ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ, ನಾರಾಯಣಗೌಡ ಇದ್ದರು.