ಶಿರಾ, ಮಧುಗಿರಿಯಲ್ಲಿ ಡಿ.27ರಂದು ಮತದಾನ: ಡಿ.8ರಿಂದ ನೀತಿ ಸಂಹಿತೆ

election commission
Published on

ತುಮಕೂರು: ವಿವಿಧ ಕಾರಣದಿಂದ ತೆರವಾಗಿರುವ ಜಿಲ್ಲೆಯ ಶಿರಾ ನಗರಸಭೆ 9ನೇ ವಾರ್ಡ್ ಮತ್ತು ಮಧುಗಿರಿ ಪುರಸಭೆ 13ನೇ ವಾರ್ಡ್ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ.

ಡಿ.8ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನ. ಡಿ.16 ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿ.18 ಕೊನೆಯ ದಿನ.

ಮತದಾನ ಅವಶ್ಯವಿದ್ದರೆ ಡಿ.27ರಂದು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮೀಸಲಿಡಲಾಗಿದೆ.

ಮತ ಎಣಿಕೆ ಡಿ.30ರಂದು ಬೆಳಗ್ಗೆ 8 ರಿಂದ ಶಿರಾ ಹಾಗೂ ಮಧುಗಿರಿ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ವ್ಯಾಪ್ತಿಯಲ್ಲಿ ಡಿ.8 ರಿಂದ ಡಿ.30ರ ವರೆಗೆ ಸದಾಚಾರ ಸಂಹಿತೆ ಜಾರಿಯಲ್ಲಿರಲಿದೆ. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸದಾಚಾರ ಸಂಹಿತೆ ಯಾವುದೇ ರೀತಿಯಲ್ಲಿ ಉಲ್ಲಂಘನೆಯಾಗದಂತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net