ಹಸಿ ಹುಲ್ಲು, ಸಡೆ ಮೇವು ಹರಾಜು

Grass
Published on

ತುಮಕೂರು: ಶಿರಾ ತಾಲ್ಲೂಕು ಚಿಕ್ಕನಹಳ್ಳಿ ಬೀಜೋತ್ಪಾದನಾ ಕೇಂದ್ರದ ಆವರಣದಲ್ಲಿ ಬೆಳೆದಿರುವ 5 ಎಕರೆ ಮುಸುಕಿನ ಜೋಳದ ಹಸಿ ಹುಲ್ಲು ಹಾಗೂ 1 ಎಕರೆ ಸಡೆ ಮೇವು 10 ದಿನದೊಳಗೆ ಕಟಾವು ಮಾಡಿಕೊಳ್ಳುವ ಸಂಬಂಧ ಮೇ.13ರಂದು ಬೆಳಗ್ಗೆ 11ಕ್ಕೆ ಬಹಿರಂಗ ಹರಾಜು ಮಾಡಲಾಗುವುದು.

ಹರಾಜಿನಲ್ಲಿ ಭಾಗವಹಿಸುವ ರೈತರು 1000 ರೂ.ಗಳ ಠೇವಣಿ ಹಣ ಪಾವತಿಸಿ ಬಿಡ್ಡು ಮಾಡಬಹುದು. ಅತೀ ಹೆಚ್ಚಿನ ಬಿಡ್ಡುದಾರರು ಬಿಡ್ಡಿನ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿ ಮಾಡಬೇಕು. ಯಶಸ್ವಿಯಾದ ಬಿಡ್ಡುದಾರರು ಬೀಜೋತ್ಪಾದನಾ ಕೇಂದ್ರದಲ್ಲಿ ಹರಾಜಿನಲ್ಲಿ ಪಡೆದ ತಾಕುಗಳಿಗೆ ಬಿಟ್ಟು ಇತರೆ ಪ್ರದೇಶಕ್ಕೆ ಪ್ರವೇಶ ಮಾಡಬಾರದು.

ಬೆಳೆದಿರುವ, ಬೆಳೆಯುವ ಇತರೆ ಯಾವುದೇ ಬೆಳೆಗಳಿಗೆ ಹಾಗೂ ಬೆಲೆಬಾಳುವ ಮರಗಳಿಗೆ/ವಸ್ತುಗಳಿಗೆ ಹಾನಿಯಾಗದಂತೆ ಕಚೇರಿ ವೇಳೆಯಲ್ಲಿ ಮಾತ್ರ ಕಟಾವು ಮಾಡಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಶಸ್ವಿಯಾಗದ ಬಿಡ್ಡುದಾರರಿಗೆ ಠೇವಣಿ ಹಣ ನಂತರ ವಾಪಸ್ಸು ನೀಡಲಾಗುವುದು ಎಂದು ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net