ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟçಮಟ್ಟದ ಶಸ್ತ್ರಚಿಕಿತ್ಸೆ ಕಾರ್ಯಾಗಾರ

23_siddartga
Published on

ತುಮಕೂರು: ನಗರದ ಶ್ರೀಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ನೇರ ಪ್ರಸಾರದ ಮೂಲಕ ಶಸ್ತ್ರಚಿಕಿತ್ಸೆ ಪ್ರಕ್ರಿಯೆ, ಸಂವಾದ ಮತ್ತು ಮಾಹಿತಿ ವಿನಿಮಯ ಕಾರ್ಯಾಗಾರ ಇಂದು ನಡೆಯಿತು.

ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಮತ್ತು ತುಮಕೂರಿನ ಪ್ರಸೂತಿ ಮತ್ತು ಸ್ತ್ರೀ ರೋಗ ಸೋಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಶಸ್ತ್ರಚಿಕಿತ್ಸೆ ಕಾರ್ಯಾಗಾರವನ್ನು ತಜ್ಞ ವೈದ್ಯರಾದ ಡಾ.ಆಸೀಸ್ ಕುಬ್ಡೆ, ಡಾ.ಜಯಪ್ರಕಾಶ್ ಪಾಟೀಲ್ ನೇರ ಪ್ರಸಾರದ ಸರ್ಜರಿ ನಡೆಸುವ ಮೂಲಕ ಚಾಲನೆ ನೀಡಿದರು.

ಶಸ್ತ್ರಚಿಕಿತ್ಸೆ ವಿಭಾಗದಲ್ಲಿನ ಮಾಹಿತಿ ವಿವರಿಸಿದ ವೈದ್ಯ ಡಾ.ವೀರೇಂದ್ರಕುಮಾರ, ಡಾ.ಚಂದ್ರಶೇಖರ ಮೂರ್ತಿ ಸಭಾಂಗಣದಲ್ಲಿ ನರೆದಿದ್ದ ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು.

ಮಹಾರಾಷ್ಟ್ರ, ಸಿಕ್ಕಿಂ, ಆಂಧ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ತಜ್ಞ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 300ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷವಾದ ನೇರ ಪ್ರಸಾರ ಚಿಕಿತ್ಸೆಯಲ್ಲಿ ಪಾಲ್ಗೊಂಡ ವೈದ್ಯ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

ಗರ್ಭಧಾರಣೆ ಮತ್ತು ಹೆರಿಗೆಯ ಅವಧಿಯಲ್ಲಿನ ರೋಗಗಳು, ಗರ್ಭಾಶಯ, ಅಂಡಾಶಯಗಳು ಸಂಬಂಧಿಸಿದ ರೋಗಗಳಿಗೆ ಆಧುನಿಕ ಸಲಕರಣೆ ಮತ್ತು ಕೌಶಲಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಬಹುದು ಎಂಬ ಅಂಶಗಳ ಕುರಿತು ಸಂವಾದಲ್ಲಿ ಪರಸ್ಪರ ಚರ್ಚಿಸಲಾಯಿತು.

ಸಾಹೇ ವಿವಿ ಉಪಕುಲಪತಿ ಡಾ.ಲಿಂಗೇಗೌಡ, ಕಲಸಚಿವ ಡಾ.ಎಂ.ಝಡ್.ಕುರಿಯನ್, ಪ್ರಾಂಶುಪಾಲ ಡಾ.ಎಂ.ಬಿ.ಸಾನಿಕೊಪ, ಉಪಪ್ರಾಂಶುಪಾಲ ಡಾ.ಎನ್.ಜಿ.ಪ್ರಭಾಕರ್, ಕಾರ್ಯಾಗಾರದ ಸಂಚಾಲಕಿ ಡಾ.ಎಚ್.ಇಂದಿರಾ, ಡಾ.ಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net