ಸಾಮಾಜಿಕ ನ್ಯಾಯ ನನ್ನ ರಾಜಕೀಯ ಬದ್ಧತೆ

Siddu
Published on

ತುಮಕೂರು: ಬಿಜೆಪಿ ಸಮಾಜಿಕ ನ್ಯಾಯದ ವಿರೋಧಿಯಾಗಿದ್ದು ಅವರಿಗೆ ಅಧಿಕಾರವೇ ಮುಖ್ಯವಾಗಿದೆ, ಅಧಿಕಾರಕ್ಕಾಗಿ ಬದ್ಧತೆ ಮುಖ್ಯ ಎಂಬುದನ್ನು ನನ್ನ ಸರ್ಕಾರ ಮಾಡಿ ತೋರಿಸಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ನಗರದ ಸಿದ್ಧಿವಿನಾಯಕ ಸಮುದಾಯದ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ರಜತ ಮಹೋತ್ಸವ ಹಾಗೂ ಮಾಜಿ ಸಚಿವ ದಿ.ಲಕ್ಷ್ಮೀನರಸಿಂಹಯ್ಯ ಅವರ ಸಂಸ್ಮರಣಾ ಸಮಾರಂಭದಲ್ಲಿ ಮಾತನಾಡಿದರು.

ಕೆಂಪೇಗೌಡರ ಜಯಂತಿಯನ್ನು ದೇವೇಗೌಡರು, ಕುಮಾರಸ್ವಾಮಿ ಮಾಡಲಿಲ್ಲ, ಅದನ್ನು ಮಾಡಿದ್ದು ನಮ್ಮ ಸರ್ಕಾರ ಎಂಬುದನ್ನು ಮರೆಯಬಾರದು. ಬಸವಣ್ಣ ಸಾಮಾಜಿಕ ನ್ಯಾಯದ ರೂವಾರಿ ಎಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅವರ ಪೋಟೋ ಹಾಕಿಸಿದ್ದು ಯಡಿಯೂರಪ್ಪ, ಬೊಮ್ಮಾಯಿ ಅವರಲ್ಲ, ಮಾಡಿದ್ದು ಎಂದು ಬೆನ್ನುತಟ್ಟಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net