ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಲ್ವರ ಸಾವು; ಸ್ನೇಹಿತನನ್ನು ರಕ್ಷಿಸಿ ಪ್ರಾಣಬಿಟ್ಟ ಮತ್ತಿಬ್ಬರು

13TMK_Matt
Published on

ತುಮಕೂರು: ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಆಯತಪ್ಪಿ ಬಿದ್ದ ವಿದ್ಯಾರ್ಥಿಯನ್ನು ರಕ್ಷಿಸಲು ಮುಂದಾಯ ತಾಯಿ, ಸಹೋದರ ಹಾಗೂ ಮತ್ತೊಬ್ಬರೂ ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.

ಸ್ನೇಹಿತ ರಂಜಿತ್‌ನನ್ನು ಬದುಕಿಸಲು ಮುಂದಾದ ಶ್ರೀಮಠದ ವಿದ್ಯಾರ್ಥಿಗಳಾದ ಶಂಕರ್( 11), ಹರ್ಷಿತ್(11) ಮೃತ ವಿದ್ಯಾರ್ಥಿಗಳು, ಇವರನ್ನು ರಕ್ಷಣೆ ಮಾಡಲು ನೀರಿಗಿಳಿದ ರಂಜಿತ್ ತಾಯಿ ಬೆಂಗಳೂರು ಬಾಗಲಗುಂಟೆಯ ಮೂಲದ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಜಲಪುರದ ಮಹದೇವಪ್ಪ (44) ಕೂಡ ಮೃತರಾಗಿದ್ದಾರೆ.

ಶ್ರೀಮಠದಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಊಟದ ನಂತರ ಕೈತೊಳೆಯಲು ಗೋಕಟ್ಟೆಗೆ ಇಳಿದಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ರಂಜಿತ್ ಎಂಬ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಮನಗರ ಮೂಲದ ಹರ್ಷಿತ್, ಹಾಗೂ ಚಿಕ್ಕಮಗಳೂರು ಮೂಲದ ಶಂಕರ್ ಮೃತ ವಿದ್ಯಾರ್ಥಿಗಳು.

ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net