11ರಂದು ಶ್ರೀನರಸಿಂಹ ಜಯಂತಿ

Devarayanadurga-3
Published on

ತುಮಕೂರು: ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ.11ರಂದು "ಶ್ರೀನರಸಿಂಹ ಜಯಂತಿ' ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀನರಸಿಂಹ ಜಯಂತಿ ಅಂಗವಾಗಿ ಶ್ರೀಭೋಗ ಮತ್ತು ಯೋಗ ನರಸಿಂಹಸ್ವಾಮಿ ಹಾಗೂ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಬೆಳಗ್ಗೆ 8ಕ್ಕೆ

ಅಭಿಷೇಕ, 10ಕ್ಕೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನಡೆಯಲಿವೆ.

ಅಂದು ಬೆಳಗ್ಗೆ 11ಕ್ಕೆ ದೇವರಾಯನದುರ್ಗ ಶ್ರೀಲಕ್ಷಿ$್ಮನರಸಿಂಹಸ್ವಾಮಿ ದೇವಸ್ಥಾನ ಹಾಗೂ ಪಂಡಿತನಹಳ್ಳಿ ಟಿವಿಎಸ್​ ಸಹಯೋಗದಲ್ಲಿ ದಾಸವಾಣಿ ನಟರಾಜು ಮತ್ತು ತಂಡದವರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12ಕ್ಕೆ ಸ್ವಾಮಿಗೆ ಹೂವಿನ ದಿವ್ಯಾಲಂಕೃತ ಕೈ ರಥದಲ್ಲಿ ಬೆಳ್ಳಿಯ ಗರುಡ ವಾಹನೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net