ರಾಜ್ಯದಲ್ಲಿ ಗೋಲ್​ಮಾಲ್​ ಸರ್ಕಾರ ಆಡಳಿತದಲ್ಲಿದೆ; ಶೋಭಕರಂದ್ಲಾಜೆ ಆರೋಪ

Shobha
Published on

ತುಮಕೂರು: ರಾಜ್ಯದಲ್ಲಿ ಗೋಲ್​ಮಾಲ್​ ಸರ್ಕಾರ ಆಡಳಿತ ನಡೆಸುತ್ತಿದ್ದು ಪ್ರತಿದಿನವೂ ಒಂದೊಂದು ಇಲಾಖೆಗಳ ಹಗರಣ ಹೊರಬರುತ್ತಿದೆ, ಬಡವರ ಹಣವನ್ನು ಚುನಾವಣೆಗೆ ಬಳಸುತ್ತಿರುವುದು ಬರಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹರಿಹಾಯ್ದರು.

ಶನಿವಾರ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಚಿವರು, ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದು, ಈಗ ಪರಿಹಾರ ಕೇಳುತ್ತಿದ್ದಾರೆ. ಸಂವಿಧಾನಾತ್ಮಕ ಅಧಿಕಾರದ ಸ್ಥಾನದಲ್ಲಿದ್ದಾಗಲೇ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಎಸ್​ಐಟಿ ತನಿಖೆ ಹೆಸರಿನಲ್ಲಿ ಮೂಡಾ ಹಗರಣ ಮುಚ್ಚಿಯಾಕುವ ಹುನ್ನಾರ ನಡೆದಿದೆ ಹಾಗಾಗಿ, ಈ ಹಗರಣವನ್ನು ಸಿಬಿಐಗೆ ವಹಿಸಬೇಕು, ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net