ಆಸಕ್ತ ರೈತರಿಗೆ ಕುರಿ, ಮೇಕೆ ಸಾಕಾಣಿಕೆ ತರಬೇತಿ

goat-and-sheep-farm
Published on

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಕುರಿ, ಮೇಕೆ ಆಧುನಿಕ ಸಾಕಾಣಿಕೆ ಕುರಿತು ಉಚಿತ ತರಬೇತಿ ನೀಡಲಾಗುತ್ತಿದೆ.

ತರಬೇತಿ ಆಸಕ್ತ 25 ರೈತರಿಗೆ ಮಾತ್ರ ನ.22 ಮತ್ತು 23ರಂದು ಹಮ್ಮಿಕೊಳ್ಳಲಾಗಿದ್ದು ನಿಗದಿಪಡಿಸಿದ ದಿನಾಂಕದAದು ಬೆಳಗ್ಗೆ 10ಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್‌ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು ಇಲ್ಲಿ ತರಬೇತಿಗೆ ಹಾಜರಾಗಬಹುದು.

ಮಾಹಿತಿಗೆ ದೂ.0816 2251214 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net