

ತುಮಕೂರು: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ನೌಕರರ ಪರವಾಗಿ ಪ್ರಮುಖ ಮೂರು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು.
ನಮ್ಮ ಕ್ರೀಡಾಕೂಟಕ್ಕೆ ಮೂರೂವರೆ ಕೋಟಿ ರೂ. ಅನುದಾನ ಸರ್ಕಾರದ ನೀಡುತ್ತಿದೆ, ಮಧ್ಯಂತರ ತುಟ್ಟಿಭತ್ಯೆ ಘೋಷಿಸಿದೆ ಇದರ ಜತೆಗೆ ಪ್ರಮುಖ ಮೂರು ಬೇಡಿಕೆಯನ್ನು ಸರ್ಕಾರ ಈಡೇರಿಸಿದರೆ ನೌಕರರ ಸದಾ ಋಣಿಯಾಗಿರಲಿದೆ ಎಂದರು.
ಹುದ್ದೆಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ, ಸಾಮಾನ್ಯ ಜನರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡುತ್ತಿದ್ದೇವೆ, ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಫರ್ಧೆ ನಡೆಯುತ್ತಿದೆ ಎಂದರು.
*ಮಧ್ಯಂತರ ಪರಿಹಾರ ಪಡೆದಿದ್ದೇವೆ, ಇನ್ನೂ ನಮ್ಮ ಬೇಡಿಕೆಯಂತೆ ಶೇ.23 ರಷ್ಟು ಡಿಎ ಹೆಚ್ಚಳ ಮಾಡಬೇಕು..
*2.50 ಲಕ್ಷ ನೌಕರ ಕುಟುಂಬಕ್ಕೆ ಅನುಕೂಲವಾಗುವಂತೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು.
*ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ಚಿಕಿತ್ಸೆ ಯೋಜನೆ ಜಾರಿಗೊಳಿಸಬೇಕು.