ಸಾಹಿತ್ಯ ಸಮಾಜದ ಏಳ್ಗೆಗಾಗಿ ದುಡಿಯಬೇಕು

SC
Published on

ತುಮಕೂರು: ಸಾಹಿತ್ಯ ಪ್ರಚಾರ, ಪ್ರದರ್ಶನಕ್ಕಷ್ಟೇ ಸೀಮಿತವಾಗಬಾರದು. ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸಮಾಜದ ಏಳ್ಗೆಗಾಗಿ ದುಡಿಯಬೇಕು ಎಂದು ಕತೆಗಾರ ಪ್ರೊ.ಅಮರೇಶ ನುಗಡೋಣಿ ಹೇಳಿದರು.

ತುಮಕೂರು ವಿವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ ಸಾಹಿತ್ಯದ ಓದು ಮತ್ತು ಗ್ರಹಿಕೆಯ ನೆಲೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯವನ್ನು ಓದುವ ಅಭ್ಯಾಸ ಮಾಡಿಕೊಂಡಾಗ ಕ್ರಮೇಣವಾಗಿ ಹರಟೆ ಮಾತುಗಳು ಕಡಿಮೆಯಾಗುತ್ತವೆ. ಅಸಂಬದ್ಧ ವಿಷಯಗಳಿಗೆ ಮೌನ ತಾಳಬೇಕೆಂಬ ಸತ್ಯ ಅರಿವಾಗುತ್ತದೆ. ಕರುಣೆ, ಸಹನೆ ಮತ್ತು ಸಮತೆಯನ್ನು ಬೆಳೆಸಿಕೊಳ್ಳಬೇಕಾದರೆ ಅಂತಃಕರಣದಿAದ ಮಾತ್ರ ಸಾಧ್ಯ ಎಂದರು.

ಸಾಹಿತ್ಯ ಎನ್ನುವುದು ಲೋಕಜ್ಞಾನ ಮತ್ತು ಮನಸ್ಸಿನಿಂದ ಲೋಕವನ್ನು ನೋಡುವ ಪರಿ. ನಮ್ಮೆಲ್ಲರ ನಿಲುವು, ಗುರಿ ಮತ್ತು ತಾತ್ವಿಕತೆಯನ್ನು ತಿಳಿದುಕೊಳ್ಳಲು ಸಾಹಿತ್ಯ ಸಹಕಾರಿಯಾಗುತ್ತದೆ. ಸಮಾಜಕ್ಕೆ ಮಾತಿನ ಮೂಲಕ ಹೇಳಲಾಗದ್ದನ್ನು ಸಾಹಿತ್ಯದ ಮೂಲಕ ಹೇಳಬಹುದು ಎಂದರು.

ವಿವಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ.ಪ್ರಕಾಶ್ ಎಂ.ಶೇಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ ವೆಂಕಟರೆಡ್ಡಿ ರಾಮರೆಡ್ಡಿ, ಸಹ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net