

ತುಮಕೂರು: ಬೆಳಧರ ಗ್ರಾಮದಲ್ಲಿ ಸರ್ಕಾರಿ ಶಾಲೆ ಕಾಂಪೌಂಡ್ಗೆ ಆಗ್ರಹಿಸಿ ಶಾಲಾ ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿನಿ ಆರಂಭಿಸಿರುವ ಪ್ರತಿಭಟನೆ ವಿಷಯ ತಿಳಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾ.ನೂರುನ್ನಿಸಾ, ನೇರವಾಗಿ ವಿದ್ಯಾರ್ಥಿನಿ ಮನೆಗೆ ಭೇಟಿ ಕೊಟ್ಟು, ಪೋಷಕರೊಂದಿಗೆ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.
ಶಾಲಾ ಆವರಣದಲ್ಲಿಯೇ ಖಾಸಗಿ ಕಲ್ಯಾಣಮಂಟಪ ಇದ್ದು ಇದರಿಂದ ನಮ್ಮ ಕಲಿಕೆಗೆ ತೊಂದರೆಯಾಗಿದೆ, ಶಿಕ್ಷಕರು ಮಾಡುವ ಪಾಠ ಕೂಡ ಕೇಳದಂತೆ ಶಬ್ಧ ಪ್ರತಿನಿತ್ಯ ಇರುತ್ತದೆ ಹಾಗಾಗಿ, ಕಂಪೌಂಡ್ ಆಗದೆ ಶಾಲೆಗೇ ಹೋಗಲು ಭಯ ಆಗುತ್ತದೆ ಎಂದು ವಿದ್ಯಾರ್ಥಿನಿ ತಿಳಿಸಿದಾಗ, ನ್ಯಾಯಾಧೀಶರು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಬೇಸರಿಸಿದರು..
ಹೈಕೋರ್ಟ್ ಹಾಗು ಸರ್ಕಾರಕ್ಕೆ ವರದಿ ಸಲ್ಲಿಸಿ ಮಗುವಿಗೆ ನ್ಯಾಯ ಒದಗಿಸುವುದಾಗಿ ಹಾಗೂ ಶೀಘ್ರದಲ್ಲೇ ಶಾಲೆಗೇ ಕಳುಹಿಸುವಂತಾ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.