ಹಾಸ್ಟೆಲ್‌ನಲ್ಲಿ ಬೆಂಕಿ, ಹೊರಗೋಡಿಬಂದ ವಿದ್ಯಾರ್ಥಿನಿಯರು

H
Published on

ತುಮಕೂರು: ನಗರದ ಬಿ.ಎಚ್.ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಬಾಲಕಿರ ವಿದ್ಯಾರ್ಥಿನಿಯರ ನಿಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಕಟ್ಟಡವೆಲ್ಲ ಹೊಗೆ ತುಂಬಿಕೊAಡಿದ್ದ ಆತಂಕಕಾರಿ ಘಟಕ ಶುಕ್ರವಾರ ರಾತ್ರಿ ನಡೆಯಿತು.

ವಿದ್ಯಾರ್ಥಿನಿಯರ ನಿಲಯದಲ್ಲಿ ಪದವಿ, ಕಾನೂನು ಪದವಿ ಹಾಗೂ ಬಿ.ಇಡಿ ಓದುತ್ತಿರುವ 300 ವಿದ್ಯಾರ್ಥಿನಿಯರಿದ್ದು ಕಟ್ಟಡವೆಲ್ಲಾ ಹೊಗೆ ತುಂಬಿಕೊAಡಿದ್ದರಿAದ ಆತಂಕಗೊAಡು ಹೊರಗೆ ಓಡಿಬಂದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುದ್ದಿ ತಿಳಿದ ಅಗ್ನಿಶಾಮಕ ದಳ ಧಾವಿಸಿಬಂದು ಬೆಂಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಆತಂಕ ನಿವಾರಣೆಯಾಗಿದೆ. ತೀವ್ರ ಹೊಗೆಯಿಂದ ಮೂರು ವಿದ್ಯಾರ್ಥಿನಿಯರು ಕೊಂಚ ಅಸ್ವಸ್ಥರಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸಾಕಷ್ಟು ದಿನದಿಂದಲೂ ವಿದ್ಯುತ್ ಶಾರ್ಟ್ ಆಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷÈ ಮಾಡಿದ್ದು ಅನಾಹುತಕ್ಕೆ ಕಾರಣ ಎಂದು ವಿದ್ಯಾರ್ಥಿನಿಯರು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮುಂದೆ ಅಳಲು ತೋಡಿಕೊಂಡರು.

ಈ ರೀತಿಯ ಅಗ್ನಿ ಅವಘಡಗಳು ಮುಂದೆ ನಡೆಯದಂತೆ ಕ್ರಮ ವಹಿಸಲಾಗುವುದು, ಘಟನೆ ಕುರಿತು ಬೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದು ಅಧಿಕಾರಿಗಳ ನಿರ್ಲP್ಷÀ್ಯ ಇದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಘಟನೆಯಿಂದ ತೀವ್ರವಾಗಿ ಭಯಗೊಂಡಿದ್ದ ವಿದ್ಯಾರ್ಥಿನಿಯರು ವಸತಿ ನಿಲಯದೊಳಗೆ ಹೋಗುವುದಿಲ್ಲ ಎಂದಾಗ ವಿದ್ಯಾರ್ಥಿನಿಯರನ್ನು ಪಕ್ಕದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net