ನನ್ನ ಮಗಳು 4 ತಿಂಗಳ ಗರ್ಭಿಣಿ, ಶಂಕ್ರಣ್ಣನ ಸಾವಿಗೆ ಇವ್ರೇ ಕಾರಣ; ಮೇಘನಾ ತಂದೆ ಆರೋಪ?

kunigal shankaranna meghana
Published on

ತುಮಕೂರು: ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ್ರು, ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ನನ್ನ ಮಗಳದ್ದು ತಪ್ಪಿಲ್ಲ, ಅವರ ತಾಯಿಯಿಂದಲೇ ಮಗ ಸಾವನಪ್ಪಿದ್ದಾರೆ ಅಂತ ದೂರು ನೀಡುತ್ತೇನೆ ಎಂದು ಮೇಘನಾ ತಂದೆ ಆರೋಪ ಮಾಡಿದ್ದಾರೆ.

2021 ಸೆಪ್ಟೆಂಬರ್​ ತಿಂಗಳಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ್ರು. ಈ ವಿಚಾರವಾಗಿ ನನಗೇನು ಗೊತ್ತಿರಲಿಲ್ಲ, ಈ ಬಗ್ಗೆ ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ನಾಲ್ಕು ದಿನಗಳ‌ ಬಳಿಕ ಠಾಣೆಗೆ ಬಂದು ಇಬ್ಬರು ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಎಂದು ಹೇಳಿದ್ರು.

ಮದುವೆ ನಂತರ ತಾಯಿ ಮಗನಿಗೂ ಹೊಂದಾಣಿಕೆ ಇರಲಿಲ್ಲ. ಒಂದೂವರೆ ತಿಂಗಳ ಹಿಂದೆ ಹೆಂಡತಿ- ತಾಯಿ ನಡುವೆ ಜಗಳವಾಗಿತ್ತು. ಈ ಕಾರಣಕ್ಕಾಗಿ ಹೆಂಡತಿಯನ್ನು ಬೆಂಗಳೂರಿನಲ್ಲಿ ಇರಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಕರೆತಂದಿದ್ದ, ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯದಶಮಿ ದಿನ ಮದುವೆಯಾಗಿದ್ರು, ನನ್ನ ಮಗಳು ಈಗ ನಾಲ್ಕು ತಿಂಗಳ ಗರ್ಭಿಣಿ.

ನನ್ನ ಮಗಳದ್ದು ತಪ್ಪಿಲ್ಲ, ತಾಯಿಯಿಂದಲೇ ಮಗ ಸಾವನಪ್ಪಿದರು ಅಂತ ದೂರು ನೀಡುತ್ತೇನೆ. ಶಂಕ್ರಣ್ಣನ ಸಾವಿಗೆ ತಾಯಿಯೇ ಕಾರಣ ಎಂದು ಮೇಘನಾ ತಂದೆ ಶಂಕರಪ್ಪ ಆರೋಪ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net