ಅಕ್ರಮ ಮರಳುಗಾರಿಗೆ ತಹಸೀಲ್ದಾರ್‌ಗೆ ಗೃಹ ಸಚಿವ ವಾರ್ನಿಂಗ್

Parameshwar
Published on

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ತಹಸೀಲ್ದಾರ್‌ಗೆ ವಾರ್ನಿಂಗ್ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕೊರಟಗೆರೆ ತಾಲೂಕು ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸೂಚನೆ ನೀಡಿದ್ದೇನೆ, ಜನರು ಹಿಂದಿನಿಂದಲೂ ಕದ್ದುಮಚ್ಚಿ ಅಕ್ರಮ ಮರಳುಗಾರಿಗೆ ನಡೆಸುತ್ತಿದ್ದು ಅದಾಗಬಾರದು ಎಂದು ಹೇಳಿದ್ದೇನೆ ಎಂದರು.

ನಾವು ಆದಷ್ಟು ಮರಳು ಗಣಿಗಾರಿಕೆ ಆಗಬಾರದು ಅಂತ ಪ್ರಯತ್ನ ಮಾಡ್ತಿದ್ದೇವೆ, ಅದರಲ್ಲೂ ವಿಶೇಷವಾಗಿ ನಮ್ಮ ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ನಡೆಯಲು ಬಿಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net