ಸಂಪಿಗೆ ಸ್ವರ್ಣ ಗೌರಿ ವಿಸರ್ಜನಾ ಮಹೋತ್ಸವ

4tvk1 swarna gwori
Published on

ತುರುವೇಕೆರೆ: ದಂಡಿನಶಿವರ ಹೋಬಳಿಯ ಸಂಪಿಗೆ ಸ್ವರ್ಣ ಗೌರಿ ವಿಸರ್ಜನಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು.

ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಮ್ಮನವರಿಗೆ ವಿವಿಧ ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯಗಳು ಜರುಗಿದವು. ಶನಿವಾರ ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಸಂಪಿಗೆ ಕೆರೆಯಲ್ಲಿ ಅಮ್ಮನವರಿಗೆ ಗಂಗಾಪೂಜೆ ಮಾಡಿದರು. ಇದಾದ ನಂತರ ರಾತ್ರಿ ಶಕ್ತಿಗಣಪತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅಮ್ಮನವರಿಗೆ ಭಾನುವಾರ ಬೆಳಗ್ಗೆ ಪೂರ್ಣಾಹುತಿ ಮಾಡಿ ತದನಂತರ ಮಹಾಮಂಗಳಾರತಿ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು.

ಭಾನುವಾರ ಕೀಲುಕುದುರೆ ನರ್ತನ, ಭದ್ರಕಾಳಿ ಸಮೇತ ಲಿಂಗದಬೀರರ ಕುಣಿತ ಮತ್ತು ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಮಾಡಲಾಯಿತು.

ಸೋಮವಾರ ಅಮ್ಮನವರ ಮುತ್ತಿನ ಪಲ್ಲಕ್ಕಿ ಉತ್ಸವ ಮಾಡಿ ಪುಷ್ಪಾಲಂಕೃತಗೊಂಡ ತೆಪ್ಪದೊಂದಿಗೆ ಸಂಪಿಗೆ ಕೆರೆಯಲ್ಲಿ ತೆರಳಿ ಅಮ್ಮನವರ ವಿಸರ್ಜನೆ ಮಾಡಲಾಯಿತು. ಬಂದಂತಹ ಭಕ್ತಾಧಿಗಳು ಮತ್ತು ಆಸುಪಾಸಿನ ಗ್ರಾಮಸ್ಥರಿಗೆ ಅನ್ನದಾಸೋಹ ನಡೆಸಲಾಯಿತು. ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ, ಅಮ್ಮನವರ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಷಣ್ಮುಖ, ಸದಸ್ಯರಾದ ಸಂಗಮೇಶ್, ನಿರಂಜನ್, ಎಸ್.ಆರ್.ಲೋಹಿತ್, ಎಸ್.ಜಿ.ವಿಜಯಕುಮಾರ್, ಕಾರ್ತಿಕ್ ಪಟೇಲ್, ಎಸ್.ಡಿ.ವಿನಯ್, ಎಸ್.ಆರ್.ವಿಜಯಕುಮಾರ್, ಮಂಜು, ಎಸ್.ಆರ್.ಮಂಜು, ಫುಡ್ ಮಂಜು, ಗಂಗಾಧರಮೂರ್ತಿ, ಎಸ್.ಕೆ.ದಿಲೀಪ್, ಅರ್ಚಕ ಪ್ರಸನ್ನ, ಮಂಜುನಾಥ್, ಗೌರಿ ಮಠದ ವಿಶ್ವಾರಾದ್ಯ ಮತ್ತು ಗ್ರಾಮದ ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net