ತುಮಕೂರಿನಲ್ಲಿ ನಾರಿಯರ ಗಮನ ಸೆಳೆದ ಸೀರೆಮೇಳ `ಸಖಿ ಲೈಫ್‌ಸ್ಟೈಲ್"

22_Saki
Published on

ತುಮಕೂರು: ನಗರದ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಶುಕ್ರವಾರ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸೀರೆಮೇಳ `ಸಖಿ ಲೈಫ್‌ಸ್ಟೈಲ್' ಪ್ರದರ್ಶನ ಗಮನ ಸೆಳೆಯಿತು.

ಕ್ಲಬ್ ಅಧ್ಯಕ್ಷೆ ಪವಿತ್ರ ಶಿವಪ್ರಕಾಶ್ ಮಾತನಾಡಿ, ನೂತನ ಪದಾಧಿಕಾರಿಗಳಿಂದ ನಡೆದ ಮೊದಲ ಕಾರ್ಯಕ್ರಮವಾಗಿದ್ದು ಸ್ವಾವಲಂಭನೆಗಾಗಿ ಸ್ವಯಂ ಉದ್ಯೋಗ ಮಾಡುವವರಲ್ಲಿ ಆತ್ಮಸ್ಥೈರ್ಯ, ಭರವಸೆ ಮೂಡಿಸಲಾಯಿತು.

ಈ ಕಾರ್ಯಕ್ರಮ ಮಹಿಳೆಯರ ಪಾಲಿಗೆ ಭರವಸೆಯ ಕಿರಣವಾಗಿದೆ, ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಈಗಾಗಲೇ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳಿಂದಾಗಿ ಮಹಿಳೆಯರಲ್ಲಿ ಭರವಸೆಯ ಕಿರಣ ಮೂಡಲಿ, ತಮ್ಮ ಮುಂದಿನ ವ್ಯಾಪಾರ ವ್ಯವಹಾರಗಳನ್ನು ಹೆಚ್ಚಾಗಿ ಮಾಡಿಕೊಂಡು ಸ್ವತಂತ್ರ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರೇಖಾ, ಡಾ.ಯು.ವಿಶಾಲಾಕ್ಷಿ, ಕ್ಲಬ್ ಕಾರ್ಯದರ್ಶಿ ಪ್ರತಿಭಾ ಹಾಗೂ ಪದಾಧಿಕಾರಿಗಳಾದ ನಾಗಶಿಲ್ಪ, ಮೀರಾ, ಭವಾನಿ, ಪ್ರಭಾ, ಉಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net