

ತುಮಕೂರು: ಜಾಗತೀಕರಣ ಸಾಹಿತ್ಯ ಮತ್ತು ಕನ್ನಡ ಭಾಷೆಗೆ ಒಕ್ಕರಿಸಿರು ಶನಿ, ವಿಶ್ವದ ಎಲ್ಲಾ ಸ್ಥಳೀಯ ಭಾಷೆಗಳಿಗೆ ಗೋಳೀಕರಣ ಬಹಳವಾಗಿಯೇ ಖತರ್‌ನಾಕ್ಕಾಗಿ ವಕ್ಕರಿಸಿದೆ ಎಂದು ಕವಿ, ನಾಟಕಕಾರ, ವಿಮರ್ಶಕ, 15ನೇ ಜಿ¯್ಲÁ ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯP್ಷÀ ಡಾ.ಎಚ್.ಎಸ್.ಶಿವಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಗಾಜಿನಮನೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ನಡಿಗಳನ್ನಾಡಿದರು.
ಇಂಗ್ಲಿಷ್‌ನ್ನ ಕಲಿಕೆ ನಮಗೆ ಅನಿವಾರ್ಯ ಆದರೆ, ಅದರ ಹುಚ್ಚು ಪ್ರವಾಹದಲ್ಲಿ ಕೊಚ್ಚಿಹೋಗದ ಹಾಗೆ ಉಳಿಯಲು ನಮ್ಮ ಭಾಷೆಯ ವ್ಯವಹಾರವನ್ನು, ಸಂಸ್ಕೃತಿಯನ್ನು ಮತ್ತು ಅಭಿವ್ಯಕ್ತಿಯನ್ನು ಮುಕ್ಕುಗೊಡಲೊಲ್ಲದ ಛಲ ನಮ್ಮದಾಗಬೇಕಿದೆ ಎಂದರು.
ನಮ್ಮ ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ ಮತ್ತು ಶಾಸನಾತ್ಮಕ ಪ್ರಯತ್ನ ಗಳನ್ನು ಅವಿರತವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾಡುಕಂಡಕಾವ್ಯ ಕನ್ನಡದೊಳಗೆ ಅನನ್ಯತೆ ಧ್ವನಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಿಶೇಷ ನಿರೀಕ್ಷೆಗಳಿವೆ ಎಂದರು.
ವಿಶ್ವ ಸಂಸ್ಕೃತಿಗೆ ವಿಶಿಷ್ಟ ಕಾಣಿಕೆ ನೀಡಿರುವ ಕನ್ನಡ ಸಂಸ್ಕೃತಿಯ ಚೌಕಟ್ಟಿನಲ್ಲಿ ತುಮಕೂರು ಜಿಲ್ಲೆಯ ಭೂಮಿಕೆಯೂ ಕಡಿಮೆಯೇನಲ್ಲ! ನಮ್ಮ ಸಾಮೂಹಿಕ ನಮ್ಮತನವನ್ನು ಕಳೆದುಕೊಳ್ಳದೆ ಇಂದಿನ ಬೆಳಕಿನಲ್ಲಿ ವಿಕಾಸ ಹೊಂದುವ ಸಂಕಲ್ಪಶಕ್ತಿ ಈ ಕ್ಷಣದ ಮಹತ್ವದ ಜರೂರು ಎಂದರು.
ಜಗತ್ತಿನ ಕೆಲವು ಮೂಲಭೂತವಾದ ಮಾರ್ಪಾಟುಗಳು ಜರುಗಿ ಅವು ಪ್ರಾದೇಶಿಕತೆಗಳ ಹಣೆಬರಹಗಳನ್ನು ತಲಸ್ಪರ್ಶಿಯಾಗಿ ಬದಲಾಯಿಸಿವೆ. ಇಂದಿನ ಪ್ರದೇಶಿಕತೆಗಳು ಕೇವಲ ಪ್ರಾದೇಶಿಕತೆಗಳಾಗಿ ಉಳಿದಿಲ್ಲ. ಸಂಪರ್ಕ ಮಾಧ್ಯಮಗಳ ಹಿಗ್ಗುವಿಕೆಯಿಂದ ಜಗತ್ತಿನ ವೈಶಾಲ್ಯ ಕೂಡ ಕುಗ್ಗುತ್ತಿದೆ. ಇಡೀ ಜಗತ್ತಿನ ಸಮಸ್ಯೆಗಳಿಂದ ಪ್ರಾದೇಶಿಕತೆಯನ್ನು ಬಿಡಿಸಿ ನೋಡುವುದು ಸುಲಭವಲ್ಲ ಎಂವ ಕೆನೆಡಾ ಸಾಹಿತ್ಯವೊಂದರ ಸಾಲುಗಳನ್ನು ಉಲ್ಲೇಖಿಸಿದರು.
ಇಂದಿಗೂ ಜಾಗತೀಕರಣ ಜಗತ್ತಿನ ಮೂಲಮಂತ್ರವಾಗಿದೆ ಆದರೆ, ಕೇವಲ ಇದು ವಾಚಕ. ಇದರ ವಾಚ್ಯ ಮತ್ತು ವ್ಯಂಗ್ಯ ಮಾರ್ಕೇಟ್ಟೀಕರಣ ಮತ್ತು ಬಹುರಾಷ್ಟಿçÃಯ ಕಂಪನಿಗಳ ದಬ್ಬಾಳಿಕೆ ಎಂದರು.
ಇAದಿಗೂ ಕೆಲವು ಪ್ರಾದೇಶಿಕ ಚಳವಳಿಗಳು ಜೀವಂತವಾಗಿದ್ದರೂ ಅವು ಉz್ದೆÃಶಿತ ಪರಿವರ್ತನೆ ತರುವಲ್ಲಿ ಪಡೆದಿರುವ ಸಫಲತೆ ಬಹಳ ಕಡಿಮೆ. ಜಗತ್ತಿನ ಪ್ರಜಾಪ್ರಭುತ್ವ ಬಾಹ್ಯ ವಹಿವಾಟುಗಳ ಸೋಗಲಾಡಿತನವನ್ನು ಉಳಿಸಿಕೊಂಡೇ ಮಾರ್ಕೇಟ್ಟೀಕರಣದ ಅಜೆಂಡಾಗಳನ್ನು ಜನರ ಮೇಲೆ ಹೇರುವುದರಲ್ಲಿ ಯಶಸ್ವಿಯಾಗಿವೆ ಎಂದರು.