ಗ್ರಾಪಂಗಳು ಸ್ಥಳೀಯ ಸರ್ಕಾರವಿದ್ದಂತೆ; ಗ್ರಾಮಾಭಿವೃದ್ಧಿಗೆ ಅಧಿಕಾರ ಬಳಸಲು ಶಾಸಕ ಸಲಹೆ

Sureshgowda
Published on

ತುಮಕೂರು: ಗ್ರಾಮ ಪಂಚಾಯಿತಿ ಸ್ಥಳೀಯವಾಗಿ ಸರ್ಕಾರದಂತೆಯೇ ಅಧಿಕಾರ ಹೊಂದಿದೆ, ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಸಲಹೆ ನೀಡಿದರು.

ತುಮಕೂರು ತಾಲೂಕು ವಿವಿಧ ಗ್ರಾಪಂಗಳಿಗೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪರಿಶಿಷ್ಟ ಸಮುದಾಯದ ಪದಾಧಿಕಾರಿಗಳು ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ನರಸಿಂಹಮೂರ್ತಿ, ರಮೇಶ್, ವೆಂಕಟೇಶ್, ಶಂಕರಣ್ಣ, ವೆಂಕಟೇಶ್, ನಾರಾಯಣಪ್ಪ, ಆನಂದ್, ಅಂಜಿನಪ್ಪ, ಪಾಪಣ್ಣ, ಡಿ.ಕೆ.ಶಿವಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net