ಕ್ರಷರ್‌ನಲ್ಲಿ ಬಂಡೆ ಉರುಳಿಬಿದ್ದು ಇಬ್ಬರು ಕಾರ್ಮಿಕರ ಸಾವು

Stone quarry crusher-
Published on

ತುಮಕೂರು: ತಾಲೂಕಿನ ಕೌತಮಾರನಹಳ್ಳಿ ಸಮೀಪ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಬಂಡೆ ಸೀಳುವ ಸಂಬಂರ್ಭದಲ್ಲಿ ಅವಘಡ ಸಂಭವಿಸಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತರಾಗಿದ್ದು, ಮತ್ತೊಬ್ಬನಿಗೆ ತೀವ್ರ ತರಹದ ಗಾಯಗಳಾಗಿದೆ.

ಬಿಹಾರದ ಬೇಗುಸರೈ ಜಿಲ್ಲೆಯ ರಾಮ್‌ಜನಪುರ್‌ನ್ನ ಮೊಹಮ್ಮದ್ ಅಬೂಲ್(29) ಹಾಗೂ ಛತ್ತೀಸ್‌ಗಡದ ಬರೋಡಾ ಸಮೀಪದ ಚುಕ್ತಿಪನಿಯ ಮೋನು (24) ಮೃತರು. ಮತ್ತೊಬ್ಬ 30 ವರ್ಷದ ಕಾರ್ಮಿಕ ಎರಾ ಎಂಬುವವನು ಗಾಯಗೊಂಡಿದ್ದಾರೆ.

ತುಮಕೂರಿನ ಹನೀಫ್ ಎಂಬುವವರಿಗೆ ಸೇರಿದ ಕರ್ನಾಟಕ ಸ್ಟೋಸ್ ಕ್ರಷರ್‌ನಲ್ಲಿ ಮಂಗಳವಾರ ಮಧ್ಯಾಹ ಘಟನೆ ನಡೆದಿದೆ. ಡ್ರಿಲ್ಲಿಂಗ್ ಮಾಡುವಾಗ ಸುಮಾರು 60 ಅಡಿ ಆಳದಿಂದ ಹೆಬ್ಬಂಡೆ ಉರುಳಿ ಕಾರ್ಮಿಕರ ಮೈ ಮೇಲೆ ಬಿದ್ದಿದೆ.

ಗಾಯಾಳು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕ್ಯಾತಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net