ಜಾತಿ ಗಣತಿ ತಾಂತ್ರಿಕ ಸಮಸ್ಯೆಗೆ ಸಮೀಕ್ಷೆದಾರರು ಹೈರಾಣ

25TMK_GANATI_
Published on

ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ಸಂದರ್ಭದಲ್ಲಿ ಎದುರಾಗುತ್ತಿರುವ ತಾಂತ್ರಿಕ ಅಡಚಣೆ ಗಣಿತಿಗೆ ನೇಮಕವಾಗಿರುವ ಶಿಕ್ಷಕರನ್ನು ಹೈರಾಣಾಗಿಸಿದೆ.

ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತ ವಿಲವಾಗಿದ್ದು ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಮೀೆಯೇ ಮಾಡಲು ಸಾಧ್ಯವಾಗದಂತಾಗಿದೆ. ಗಣತಿದಾರರು ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯಿಲ್ಲದೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಹೇಳುತ್ತಿರುವುದು ಸಮಸ್ಯೆಯನ್ನು ಜಟಿಲಗೊಳಿಸುತ್ತಿದೆ.

ಜಾತಿ ಗಣತಿ ಪ್ರಕ್ರಿಯೆಯ ವೇಳೆ ಹಲವು ಕಡೆಗಳಲ್ಲಿ ಸರ್ವರ್​ ಸಮಸ್ಯೆ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಗಳು ವರದಿಯಾಗಿದ್ದು, ಇದರ ಪರಿಣಾಮವಾಗಿ ಸಮೀಕ್ಷಾ ಕಾರ್ಯಕ್ಕೆ ವ್ಯತ್ಯಯ ಉಂಟಾಗಿದೆ. ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕಾದ ಜಿಲ್ಲಾಡಳಿತ ಗಣತಿಯನ್ನು ರ್ನಿಲಕ್ಷ$್ಯ ಮಾಡಿದ್ದು ಸಂಪೂರ್ಣ ಹೊಣೆಯನ್ನು ಶಿಕ್ಷಕರ ಹೆಗಲಿಗೇರಿಸಿದೆ.

ಗುರುವಾರ ತುಮಕೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿಯೋಜನೆಯಾಗಿರುವ ಗಣತಿದಾರ ಶಿಕ್ಷಕರು ನಗರದ ಬಿಸಿಎಂ ಇಲಾಖೆ ಕಚೇರಿಯಲ್ಲಿ ಆರಂಭಿಸಿರುವ ಎಂಆರ್​ಪಿ ಕಚೇರಿ ಬಳಿ ಜಮಾಯಿಸಿದ್ದರು. ಕೆಎಸ್​ಸಿಬಿಸಿ ಆ್ಯಪ್​ ತಾಂತ್ರಿಕ ಸಮಸ್ಯೆಗಳನ್ನು ಭಗೆಹರಿಸಬೇಕು ಎಂದು ಆಗ್ರಹಿಸಿದರು.

ಆ್ಯಪ್​ನಲ್ಲಿ ಯುಎಚ್​ ಐಡಿ ನಂಬರ್​ ತೋರಿಸದೇ ತೊಂದರೆಯಾಗುತ್ತಿದೆ, ಮೂರ್ನಾಲ್ಕು ಮನೆ ಮಾಹಿತಿ ಸಂಗ್ರಹಿಸಿದ ನಂತರ ಏಕಾಏಕಿ ಆಪ್​ ಲಾಕ್​ ಆಗುತ್ತಿದೆ ಈ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಸಮೀೆ ಅಸಾಧ್ಯ ಎಂದು ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಶಿಕ್ಷಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

ಬುಧವಾರದವರೆಗೂ ಆಪ್​ನಲ್ಲಿಯೂ ರೂಟ್​ ಮ್ಯಾಪ್​ ತೋರಿಸಲಾಗಿತ್ತು ಆದರೆ, ಗುರುವಾರ ಬೆಳಗ್ಗೆ ರೂಟ್​ ಮ್ಯಾಪ್​ ಕೂಡ ರದ್ದು ಮಾಡಲಾಗಿದ್ದು ಗಣತಿಗೆ ಹೋರಟಿದ್ದ ಶಿಕ್ಷಕರಲ್ಲಿ ಗೊಂದಲ ಹೆಚ್ಚಳಕ್ಕೆ ಕಾರಣವಾಗಿದೆ. ತುಮಕೂರು ದಸರಾ ಸಂಭ್ರಮದಲ್ಲಿ ಮುಳುಗಿರುವ ಜಿಲ್ಲಾಡಳಿತ ಮೂರು ದಿನ ತಡವಾಗಿ ಸಮೀೆ ಅರಂಭಿಸಿದ್ದು ಮತ್ತಷ್ಟು ದಿನ ತಡವಾಗುವ ಆತಂಕ ಎದುರಾಗಿದ್ದು ಸಮೀೆಯ ಕಾಲವಾಧಿ ವಿಸ್ತರಿಸಬೇಕು ಎಂದು ಆಗ್ರಹ ಕೇಳಿಬಂದಿದೆ.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸರ್ಕಾರ ರೂಪಿಸಿರುವ ತಂತ್ರಾಂಶದ ಕಿಟ್​ ನೀಡಿ ಸುಮ್ಮನಾಗಿದದ್ದಾರೆ, ಸಾಕಷ್ಟು ತಾಂತ್ರಿಕ ಸಮಸ್ಯೆ ಕಾಣಿಸುತ್ತಿದ್ದು ಸಮೀೆ ಮಾಡುವುದೇ ಕಷ್ಟವಾಗಿದೆ. ಸಮಸ್ಯೆ ಪರಿಹಾರಕ್ಕೆ ಯಾರ್​ನು ಕೇಳಬೇಕು ಎಂಬುದೇ ತಿಳಿಯದಂತಾಗಿದ್ದು ಐದು ಮನೆಯಿಂದ ಮಾಹಿತಿ ಸಂಗ್ರಹಿಸಲು ದಿನ ಮುಗಿಯುತ್ತಿದೆ. ಗಣತಿ ತಂತ್ರಾಂಶದ ದೋಷ ಸರಿಪಡಿಸಿಕೊಟ್ಟರಷ್ಟೇ ನಿಗದಿತ ಅವಧಿಯಲ್ಲಿ ಸಮೀೆ ಮುಗಿಯಲು ಸಾಧ್ಯ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಗಣತಿದಾರ ಶಿಕ್ಷಕ ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net