

ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿರುವ 11 ಉಪನೋಂದಣಿ ಕಚೇರಿಗಳು ಇನ್ನು ಮುಂದೆ ನಿಗಧಿಪಡಿಸಿದ ರಜಾದಿನಗಳಾದ 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರಗಳಂದು ಕಾರ್ಯ ನಿರ್ವಹಿಸಲಿವೆ.
ರಜಾ ದಿನದಂದು ಕರ್ತವ್ಯ ನಿರ್ವಹಿಸುವ ಉಪ ನೋಂದಣಿ ಕಚೇರಿಗೆ ಕರ್ತವ್ಯ ನಿರ್ವಹಿಸಿದ ನಂತರ ಬರುವ ಮಂಗಳವಾರ ರಜಾ ದಿನ ಎಂದು ಘೋಷಿಸಲಾಗುವುದು. ಜಿಲ್ಲೆಯಲ್ಲಿ ರಜಾ ದಿನಗಳಂದು ಕಾರ್ಯನಿರ್ವಹಿಸುವ ಉಪನೋಂದಣಾಧಿಕಾರಿಗಳ ಕಚೇರಿಗೆ ಜೂ.1 ರಿಂದ ಡಿಸೆಂಬರ್ 28ರ ವರೆಗೆ ಕರ್ತವ್ಯ ದಿನ ್ನ ಕಚೇರಿವಾರು ದಿನಾಂಕ ನಿಗದಿಪಡಿಸಲಾಗಿದೆ.
ಕುಣಿಗಲ್ ಉಪನೋಂದಣಿ ಕಚೇರಿ ಜೂನ್ 1, ಜುಲೈ 26, ಸೆಪ್ಟೆಂಬರ್ 14, ನವೆಂಬರ್ 8; ಮಧುಗಿರಿ-ಜೂನ್ 8, ಜುಲೈ 22, ಸೆಪ್ಟೆಂಬರ್ 21 ಹಾಗೂ ನವೆಂಬರ್ 9, ತುಮಕೂರು- ಜೂನ್ 14, ಆಗಸ್ಟ್ 3, ಸೆಪ್ಟೆಂಬರ್ 27, ನವೆಂಬರ್ 16, ತಿಪಟೂರು- ಜೂನ್ 15, ಆಗಸ್ಟ್ 9, ಸೆಪ್ಟೆಂಬರ್ 28, ನವೆಂಬರ್ 22, ಗುಬ್ಬಿ-ಜೂನ್ 22, ಆಗಸ್ಟ್ 10, ಅಕ್ಟೋಬರ್ 5, ನವೆಂಬರ್ 23, ಚಿಕ್ಕನಾಯಕನಹಳ್ಳಿ- ಜೂನ್ 28, ಆಗಸ್ಟ್ 17, ಅಕ್ಟೋಬರ್ 11, ಡಿಸೆಂಬರ್ 7, ತುರುವೇಕೆರೆ-ಜೂನ್ 29, ಆಗಸ್ಟ್ 23, ಅಕ್ಟೋಬರ್ 12, ಡಿಸೆಂಬರ್ 13; ಕೊರಟಗೆರೆ-ಜುಲೈ 6, ಆಗಸ್ಟ್ 24, ಅಕ್ಟೋಬರ್ 19, ಡಿಸೆಂಬರ್ 14; ಪಾವಗಡ- ಜುಲೈ 12, ಆಗಸ್ಟ್ 31, ಅಕ್ಟೋಬರ್ 25, ಡಿಸೆಂಬರ್ 21; ಸಿರಾ- ಜುಲೈ 13, ಸೆಪ್ಟೆಂಬರ್ 7, ಅಕ್ಟೋಬರ್ 26, ಡಿಸೆಂಬರ್ 27, ಹುಲಿಯೂರುದುರ್ಗ ಉಪನೋಂದಣಿ ಕಚೇರಿಯು ಜುಲೈ 20, ಸೆಪ್ಟೆಂಬರ್ 13, ನವೆಂಬರ್ 2 ಹಾಗೂ ಡಿಸೆಂಬರ್ 28ರಂದು ಕಾರ್ಯ ನಿರ್ವಹಿಸಲಿವೆ.
ಈಗಾಗಲೇ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಜಿಲ್ಲಾ ವ್ಯಾಪ್ತಿಯ ರಜಾ ದಿನದಲ್ಲಿ ಕಾರ್ಯ ನಿರ್ವಹಿಸುವ ಕಚೇರಿಯಲ್ಲಿ ಜಿಲ್ಲೆಯ ಯಾವುದೇ ಸ್ವತ್ತನ್ನು ನೋಂದಣಿ ಮಾಡಿಕೊಳ್ಳಬಹುದು.