

ತಿಪಟೂರು: ಲೋಕಕಲ್ಯಾಣಕ್ಕಾಗಿ ಜುಲೈ 12 ರಿಂದ 14ರ ವರೆಗೆ ಮೂರು ದಿನಗಳ ಕಾಲ ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನದೀಶ್ವರ ಶ್ರೀಶ್ರೀಶ್ರೀ1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಭಗವತ್ಪಾದರು ಅವರಿಂದ ಪ್ರತಿನಿತ್ಯ ಬೆಳಗ್ಗೆ 9ಕ್ಕೆ ಇಷ್ಟಲಿಂಗ ಪೂಜೆ ನಡೆಯಲಿದೆ.
ಪೂಜೆಯ ನಂತರ ಪ್ರಸಾದ ವಿನಿಯೋಗ, ಸಂಜೆ 7ಕ್ಕೆ ಧರ್ಮ ಜಾಗೃತಿ ಸಭೆ ಹರಗುರು ಚರಮೂರ್ತಿಗಳಿಂದ ಧರ್ಮ ಪ್ರವಚನ, ನಂತರ ಪ್ರಸಾದ ವಿನಿಯೋಗ ಸಮಾಜದ ವತಿಯಿಂದ ನಡೆಯಲಿದ್ದು ನಾಡಿನ ಭಕ್ತರು ಧರ್ಮಾಭಿಮಾನಿಗಳು ಆಗಮಿಸಲಿದ್ದಾರೆ ಎಂದು ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸಮ್ಮೇಳನದಲ್ಲಿ ಕಾಡಸಿದ್ದೇಶ್ವರ ಮಠದ ಶ್ರೀಕರಿವೃಷಬದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮಿಜಿ ಸೇರಿದಂತೆ ಹಲವಾರು ಮಠ ಮಾನ್ಯಗಳ ಪೂಜ್ಯರು ಆರ್ಶೀವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟಿ.ಎನ್.ಪರಶಿವಮೂರ್ತಿ, ಜಿ.ಕೆ.ನಟರಾಜು, ಟಿ.ಎಂ.ದಿವಾಕರ್, ತೋಂಟಾರಾಧ್ಯ, ಸಾಸಲು ಕುಮಾರ್ ಇದ್ದರು.