ಕತ್ತೆಗಳ ಮದುವೆ ಮಾಡಿಸಿದ ತುಪ್ಪದಕೋಣ ಗೊಲ್ಲರಹಟ್ಟಿ

rrrrr
Published on

ತುಮಕೂರು: ಉತ್ತರ ಕರ್ನಾಟಕದಲ್ಲಿ ಮಳೆ ಬಂದು ಭೀಮ ನದಿ ಪ್ರವಾಹದಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ ಆದರೆ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಮಳೆಯ ಆಗಮನಕ್ಕಾಗಿ ಜನ ಕಾದು ಕುಳಿತಿದ್ದಾರೆ ಮಳೆ ಬರಲೆಂದು 10 ಹಲವ ರೀತಿಯ ಸಂಪ್ರದಾಯ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ವರ್ಣನ ಕೃಪೆಗಾಗಿ ಕಾದುಕೊಳ್ಳುತ್ತಿದ್ದಾರೆ.

ಮಳೆಯ ಅವಕೃಪೆಯಿಂದ ಈರುಳ್ಳಿ ಬೆಳೆ ನಾಶವಾಗಿದೆ ರಾಗಿ ಬೆಳೆ ನೆಲ ಕಚ್ಚುತ್ತಿದೆ ಕಡಲೆ ಕಾಯಿ ಕಳೆಗುಂದಿ ರೈತರು ಕಂಗಾಲಾಗಿದ್ದಾರೆ ಹಾಗಾಗಿ ಹಲವು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ ಅದೇ ರೀತಿಯ ಒಂದು ವಿಶಿಷ್ಟ ವಿನೂತನ ಸಾಂಪ್ರದಾಯಿಕ ಕಾರ್ಯಕ್ರಮ ಶಿರಾ ತಾಲೂಕು, ಬುಕ್ಕಾಪಟ್ಟಣ ಹೋಬಳಿ ತುಪ್ಪದ ಕೋಣ ಗೊಲ್ಲರಹಟ್ಟಿಯಲ್ಲಿ ನಡೆಯಿತು.

ಕುರಿ ಕಾಯಿಗಳಿಗೆ ನೀರಿಲ್ಲ ಮೇವಿಲ್ಲ ಬೆಳೆಗಳು ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ ವರುಣನ ಕೃಪೆಗಾಗಿ ಗ್ರಾಮದ ಕತ್ತೆಗಳನ್ನು ವಧುವರಂತೆ ಸಿಂಗರಿಸಿ ಮನುಷ್ಯರ ಮದುವೆಯಲ್ಲಿ ಪಾಲಿಸಲಾಗುವ ಎಲ್ಲಾ ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಪಾಲಿಸಿ ಕತ್ತೆಗಳ ಮದುವೆಯನ್ನು ಮಾಡಿಸಲಾಯಿತು.

ಗ್ರಾಮದ ಎಲ್ಲಾ ಜನರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಕತಾಳೀಯ ಎಂಬಂತೆ ಗುರುವಾರ ರಾತ್ರಿ ಬುಕ್ಕಾಪಟ್ಟಣ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net