

ತುಮಕೂರು: ಜಿಲ್ಲೆಯಾದ್ಯಂತ ಜ.6ರಿಂದ 10ರ ವರೆಗೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕ ರೈತರಿಗೆ ಮಾಹಿತಿ ನೀಡಿದೆ. ಪೂರ್ವಾಷಾಡ ನಕ್ಷತ್ರದ ಮಳೆಯ ಕಾಲ ಡಿ.29ರಿಂದ ಆರಂಭವಾಗಿದ್ದು ಜ.10ರ ವರೆಗೂ ಇರಲಿದೆ.
ಮುಂದಿನ ಐದು ದಿನ ಮೋಡಕವಿದ ವಾತಾವರಣ, ಕಡಿಮೆ ಉಷ್ಣಾಂಶ, ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಳೆ ಹಾಗೂ ಜಾನುವಾರುಗಳಲ್ಲಿ ರೋಗ ಮತ್ತು ಕೀಟಗಳ ಬೆಳವಣಿಗೆ ಕೂಡ ಜಾಸ್ತಿಯಾಗಲಿದೆ ಹಾಗಾಗಿ, ಸುರಕ್ಷಿತ ಕ್ರಮಗಳನ್ನು ಮುಂಚಿತವಾಗಿ ಅನುಸರಿಸಬೇಕು ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಜ.7ರಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 23ಮಿಮೀ ಮಳೆ, ಗುಬ್ಬಿ 11, ಕೊರಟಗೆರೆ 4.5, ಕುಣಿಗಲ್ 5.0, ಮಧುಗಿರಿ 6.0, ಪಾವಗಡ 8.3, ಶಿರಾ 12.0, ತಿಪಟೂರು 23.4, ತುಮಕೂರು 8.7 ಹಾಗೂ ತುರುವೇಕೆರೆ 17.4ಮಿಮೀ ಮಳೆಯಾಗುವ ಸಾಧ್ಯತೆಯಿದೆ.