ಮಗೆ ಮಳೆ ಬಿದ್ದರೆ ಮಗೆ ಗಾತ್ರದ ತೆನೆ

rain
Published on

ತುಮಕೂರು: ಆಗಸ್ಟ್​ 17ರಿಂದ 30ರ ವರೆಗೂ ಮಗೆ ಮಳೆ ಕಾಲವಾಗಿದ್ದು ಭಾರತೀಯ ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಆ.19ರ ವರೆಗೂ ಹಗುರ ಮಳೆಯಾಗುವ ಸಾಧ್ಯತೆಯಿದೆ.

ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದು ಮಣ್ಣಿನ ತೇವಾಂಶದ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ, ಸಸ್ಯ ಸಂರಕ್ಷಣೆ ಸಿಂಪರಣೆ ಮತ್ತು ರಾಸಾಯನಿಕ ಗೊಬ್ಬರ ಬಳಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net