ಜಿಲ್ಲೆಯಲ್ಲಿ ಗುರುವಾರ ಭರ್ಜರಿ ಮಳೆ ಸಾಧ್ಯತೆ

Rain
Published on

ತುಮಕೂರು: ಜಿಲ್ಲೆಯಾದ್ಯಂತ ಮೇ.14ರಿಂದ 18ರ ವರೆಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ.15ರಂದು ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳುವ ಸೂಚನೆಯಿದ್ದು ಜನರು ಜಾಗರೂಕರಾಗಿರಬೇಕಿದೆ.

ಗಾಳಿ ಗಂಟೆಎ 5.0&9.0ಕಿಮೀ ವೇಗದಲ್ಲಿ ಬೀಸುವ ಸಂಭವವಿದ್ದು ಗರಿಷ್ಟ ಉಷ್ಣಾಂಶ 30.3ಡಿಗ್ರಿ&34.0ಡಿಗ್ರಿ ಮತ್ತು ಕನಿಷ್ಟ 22.0ಯಿಂದ 23.0ಡಿಗ್ರಿ ಸೆಲ್ಸಿಯಸ್​, ಬೆಳಗಿನ ಆದ್ರತೆ ಪ್ರಮಾಣ ಶೇ.73&80 ಇದ್ದು ಮಧ್ಯಾಹ್ನ 31&33 ಇರುವ ಸಾಧ್ಯತೆಯಿದೆ.

ಮೇ.15ರಂದು ಗುರುವಾರ ಚಿಕ್ಕನಾಯಕನಹಳ್ಳಿಯಲ್ಲಿ 25ಮಿಮೀ, ಗುಬ್ಬಿ 23.3, ಕೊರಟಗೆರೆ 26.8, ಕುಣಿಗಲ್​ 21.6, ಮಧುಗಿರಿ 19.2, ಪಾವಗಡ 5.1, ಶಿರಾ 8.5, ತಿಪಟೂರು 27.6, ತುಮಕೂರು 28.3 ಹಾಗೂ ತುರುವೇಕೆರೆ ತಾಲುಕಿನಲ್ಲಿ 4.0ಮಿಮೀ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ ಸುರಿದ್ದು, ಬುಧವಾರ ಕೂಡ ಎಲ್ಲೆಡೆ ಮಳೆಯಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net