ಅಶ್ವಿನಿ ಮಳೆಯಾದರೆ ಅರಿಶಿಣಕ್ಕೆ ಮೇಲು, ಅಡಕೆಗೆ ಬೀಳು

Rain
Published on

ತುಮಕೂರು: ಅಶ್ವಿನಿ ನಕ್ಷತ್ರದ ಮಳೆಯ ಕಾಲ ಏ.14ರಿಂದ 26ರ ವರೆಗೂ ಇರಲಿದ್ದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಏ.12ರಿಂದ 16ರ ವರೆಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಗಾಳಿ ಗಂಟೆಗೆ ಸರಾಸರಿ 5.0&9.0ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದ್ದು ಗರಿಷ್ಟ ಉಷ್ಣಾಂಶ 33 ರಿಂದ 34 ಡುಗ್ರಿ ಸೆಲ್ಸಿಯಸ್​, ಬೆಳಗಿನ ಆದ್ರತೆ ಪ್ರಮಾಣ ಶೇ.68&72 ಇದ್ದು ಮಧ್ಯಾಹ್ನ 26&33 ಇರುವ ಸಾಧ್ಯತೆಯಿದೆ.

ಲಭ್ಯವಿರುವ ಮಳೆಯನ್ನು ಬಳಸಿಕೊಳ್ಳುವ ಮೂಲಕ ರೈತರು ಉಳುಮೆಯನ್ನು ಕೈಗೆತ್ತಿಕೊಳ್ಳಬಹುದು ಮತ್ತು ಪೂರ್ವ ಮುಂಗಾರು ಮಳೆ ಬಿತ್ತನೆಗಾಗಿ ಭೂಮಿಯನ್ನು ಸಿದ್ದಪಡಿಸಬಹುದು. ಹಗಲಿನ ಸಮಯದಲ್ಲಿ ಹೆಚ್ಚಿನ ಗಾಳಿಯ ವೇಗ ಮತ್ತು ತಾಪಮಾನದಿಂದ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಕೃಷಿ ಮತ್ತು ತೋಟಗಾರಿಕೆ ಬಳೆಗಳಿಗೆ ಸಿಂಪಡಿಸುವುದನ್ನು ತಪ್ಪಿಸಬೇಕಿದೆ.

ಏ.12ರಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 8.4ಮಿಮೀ, ಗುಬ್ಬಿ 2.1, ಕೊರಟಗೆರೆ 2, ಕುಣಿಗಲ್​ 1.9, ಮಧುಗಿರಿ 1.6, ಪಾವಗಡ 3, ಶಿರಾ 4.5, ತಿಪಟೂರು 5.9, ತುಮಕೂರು 1.9 ಹಾಗೂ ತುರುವೇಕೆರೆ 2.8ಮಿಮೀ ಮಳೆ ನಿರೀೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net