ರೈಲ್ವೆ ಬಡ್ತಿ ಪರೀಕ್ಷೆಯೂ ಕನ್ನಡದಲ್ಲಿ

Railway
Published on

ತುಮಕೂರು: ನೈಋತ್ಯ ರೈಲ್ವೆ ಇಲಾಖೆ ಎಲ್​ಡಿಸಿಒ ಹಾಗೂ GDCE (Limited Departmental Competitive Exam & General Departmental Competitive Exam)/ ಮುಂಬಡ್ತಿಗೆ ಸಂಬಂಧಿಸಿದ ಇಲಾಖಾ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ವಿ.ಸೋಮಣ್ಣ ಕಚೇರಿ ಪ್ರಕಟಣೆ ತಿಳಿಸಿದೆ.


ಈ ಮೊದಲು ಇಂಗ್ಲಿಷ್​ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು. ಇದೀಗ ಇವುಗಳ ಜತೆಗೆ, ಕನ್ನಡದಲ್ಲಿಯೂ ಸಹ ಪರೀಕ್ಷೆ ನಡೆಸಲಾಗುವುದು. ಇದರಿಂದ ಕನ್ನಡಿಗ ಪರೀಕ್ಷಾರ್ಥಿಗಳಿಗೆ ಸ್ವಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ

ಈಗಾಗಲೇ ರೈಲ್ವೆ ಇಲಾಖೆಗೆ ಸೇರಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net