ಆರ್​.ನಾರಾಯಣ ರಾಜಕೀಯ ಜೀವನ...

R.Narayana_web
Published on

ತುಮಕೂರು: ಆರ್​.ನಾರಾಯಣ ರಾಜಕೀಯ ಜೀವನಕ್ಕೆ ಪ್ರವೇಶ ಪಡೆದಿದ್ದೇ ಒಂದು ಕೌತುಕ. 1989ರಲ್ಲಿ ಬೆಳ್ಳಾವಿ ಕ್ಷೇತ್ರದಿಂದ ಶಿವಮೂರ್ತಿ ಅವರಿಗೆ ಹಾಗೂ ಕುಣಿಗಲ್​ ಕ್ಷೇತ್ರದಿಂದ ಎಸ್​.ಪಿ.ಮುದ್ದಹನುಮೇಗೌಡರಿಗೆ ಕಾಂಗ್ರೆಸ್​ ಬಿ.ಾರಂ ನೀಡಿತ್ತು ಆದರೆ, ಕಡೆಗಳಿಗೆ ಈವರೆಗೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿ ಬೆಳ್ಳಾವಿಯಲ್ಲಿ ಆರ್​.ನಾರಾಯಣ ಹಾಗೂ ಕುಣಿಗಲ್​ನಲ್ಲಿ ಕೆ.ಲಕ್ಕಪ್ಪ ಅವರಿಗೆ ಸಿ.ಾರಂ ನೀಡಿದ್ದು ರಾಜಕೀಯ ಇತಿಹಾಸ.

ಈ ಸಂದರ್ಭದಲ್ಲಿ ಅನಿರೀತವಾಗಿ ಆರ್​.ನಾರಾಯಣ್​ ರಾಜಕೀಯ ಜೀವನಕ್ಕೆ ಕಾಲಿಟ್ಟರು. 1989, 1994 ಹಾಗೂ 1999ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಫರ್ಧಿಸಿ ಗೆದ್ದರು. 2004ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಮತ್ತೆ ಸ್ಫರ್ಧೆ ಮಾಡುವ ಅವಕಾಶವೇ ಸಿಗಲಿಲ್ಲ.

1994ರ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಸ್ಫರ್ಧಿಸಿ ಸೋಲು ಕಂಡಿದ್ದ ಜಿ.ಎಸ್​.ಬಸವರಾಜು ಅವರಿಗೆ 1996ರ ಲೋಕಸಭಾ ಟಿಕೆಟ್​ ಕೈತಪ್ಪಿದ ಸಂದರ್ಭದಲ್ಲಿ ಬೆಳ್ಳಾವಿ ಶಾಸಕರಾಗಿದ್ದ ನಾರಾಯಣ್​ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್​ ಪಡೆದು ಸ್ಫರ್ಧಿಸಿದ್ದರು. ಆಗತಾನೆ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ವೈ.ಕೆ.ರಾಮಯ್ಯ ಅವರಿಗೆ ಟಿಕೆಟ್​ ಸಿಗಬಾರದು ಎಂಬ ಕಾರಣಕ್ಕೆ ಆರ್​.ನಾರಾಯಣ ತಾವೇ ಕಾಂಗ್ರೆಸ್​ ಪಕ್ಷದಿಂದ ಸ್ಫರ್ಧೆ ಮಾಡಿ ಸೋಲು ಕಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net