

ಕೊರಟಗೆರೆ: ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಕಾಲೇಜು ಬಳಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ದಿಲೀಪ್ ಮತ್ತು ತಂಡ ರಕ್ಷಿಸಿ ಕಾಡಿಗೆ ಬಿಟ್ಟಿದೆ.
ಶನಿವಾರ ರಾತ್ರಿ ಕಾಲೇಜು ಬಳಿಯ ಕಲ್ಲುಗಳ ಸಂದಿಯಲ್ಲಿ ಕಾಣಿಸಿಕೊಂಡ ಹೆಬ್ಬಾವು ಕಂಡು ಭಯಗೊಂಡ ಸ್ಥಳಿಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಕೂಡಲೇ ಉರಗ ತಜ್ಞರ ತಂಡ ಆಗಮಿಸಿ ಹಾವು ರಕ್ಷಿಸಿದೆ.
ಹಾವು ಸುಮಾರು 12ಕೆಜಿ ತೂಕ 10 ಅಡಿ ಉದ್ದವಿದ್ದು 15 ವರ್ಷ ವಯಸ್ಸಾಗಿರಬಹುದು ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಸುರೇಶ್ ತಿಳಿಸಿದರು.
ವಲಯ ಅರಣ್ಯ ಅಧಿಕಾರಿ ನವೀನ್ಕುಮಾರ್, ಚಾಂದ್ ಪಾಷ, ಮಂಜುನಾಥ ಹಾಗೂ ಉರಗ ತಜ್ಞ ಹನುಮಯ್ಯ, ಗುರುಕಿರಣ್, ಸ್ಥಳಿಯರಾದ
ಮಾರುತಿ, ಮಂಜುನಾಥ್ ಮತ್ತಿತರರು ಇದ್ದರು.