ಸಿಡಿಲು ಬಡಿದು ವ್ಯಕ್ತಿ ಸಾವು

PVG_1
Published on

ಪಾವಗಡ:- ತಾಲ್ಲೂಕಿನ ನಿಡಗಲ್ ಹೋಬಳಿ ಕೊಡಿಗೆಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ್ (45) ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಭಾನುವಾರ ಅರಸೀಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.

ಗುಡುಗು, ಮಿಂಚು ಸಹಿತ 20ಮಿಮಿ ಸುರಿದ ಜೋರು  ಮಳೆಯಿಂದ ಶ್ರೀನಿವಾಸ್ ತೋಟಕ್ಕೆ ದೈನಂದಿನಂತೆ ಕೃಷಿ ಕೆಲಸಕ್ಕೆಂದು ಹೊಲಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಸಿಡಿದು  ಬಡಿದು  ಶ್ರೀನಿವಾಸ್ ಮೃತಪಟ್ಟಿದ್ದಾರೆ. 

ಮೃತರಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಗಂಡು ಮಗು ನಿಖಿತ್ ಕುಮಾರ್(14) ಹೆಣ್ಣು ಮಗು ನೇಹಾ ಶ್ರೀ (4)ಇದ್ದಾರೆ. 

ತಹಸೀಲ್ದಾರ್ ಡಿ.ಎನ್ ವರದರಾಜು ಹಾಗೂ ಪಿಎಸ್​ಐ ತಾರಾಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ವರದಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net