

ಪಾವಗಡ :- ತಾಲ್ಲೂಕಿನ ನಿಡಗಲ್ ಹೊಬಳಿಯ ಕೊಂಡೆತಿಮ್ಮನಹಳ್ಳಿ ಗ್ರಾಮದ ರೈತರು ತೋಟದ ಕೆಲಸ ಮಾಡುವ ವೇಳೆ ಕರಡಿ ದಾಳಿ ನಡೆಸಿ ಪರಚಿರುವ ಘಟನೆ ನೆಡೆದಿದೆ.
ಕೊಂಡೆತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಾಸಣ್ಣ(66) ರೈತನಾದ ಉತ್ತಪ್ಪ (62) ಈ ಇಬ್ಬರು ಗ್ರಾಮದ ಹೊರವಲದಲ್ಲಿ ತಮ್ಮ ಅಡಿಕೆ ತೋಟದ ಜಮೀನಿನಲ್ಲಿ ಕೆಲಸಕ್ಕೆಂದು ಇಂದು ಹೋಗಿದ್ದರು ಸಂಜೆ 3 ಗಂಟೆ ಸಮಯದಲ್ಲಿ ತೋಟದಲ್ಲಿದ್ದ ಮರಿ ಹಾಕಿರುವ ಕರಡಿಯೊಂದು ಏಕಾಏಕಿ ಈ ಇಬ್ಬರು ರೈತರ ಮೇಲೆ ದಾಳಿ ನಡೆಸಿ ಮೊಣಕಾಲು,ಹೊಟ್ಟೆ,ಬೆನ್ನು,ತೊಡೆ ಭಾಗಕ್ಕೆ ತೀವ್ರವಾಗಿ ಪರಚಿ ತೀವ್ರವಾಗಿ ಗಾಯಗಳನ್ನುಂಟು ಮಾಡಿದೆ.
ಇದೇ ವೇಳೆ ಕರಡಿ ದಾಳಿಯಿಂದ ಕಿರುಚಾಡುತ್ತಿದ್ದಾಗ ಪಕ್ಕದಲ್ಲಿದ್ದ ಎಮ್ಮೆಗಳು ಗಾಭರಿಯಾಗಿ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಂಡು ಕರಡಿ ಮತ್ತು ರೈತರ ಮೇಲೆ ದಾಳಿ ನಡೆಸಿದ್ದರಿಂದ ಪ್ರಾಣಾಪಯಾದಿಂದ ಬದುಕುಳಿದ್ದಿದ್ದಾರೆ.
ಸದ್ಯ ಈ ಇಬ್ಬರು ರೈತರಿಗೆ ಕೊಂಡೆತಿಮ್ಮನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ.