ವಿಷ ಸೇವಿಸಿ ದಂಪತಿ ಆತ್ಮಹತ್ಯೆ.

PVG
Published on

ಪಾವಗಡ: ಪಟ್ಟಣದ ಹೊರವಲಯದ ಚಳ್ಳಕೆರೆ ಕ್ರಾಸ್ ಸಮೀಪ ಗಂಡ, ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ವೈ.ಎನ್.ಹೊಸಕೋಟೆ ಸಮೀಪದ ಆಂದ್ರದ ವೆಂಕಂಪಲ್ಲಿ ಗ್ರಾಮದ ಗೋವಿಂದರೆಡ್ಡಿ ಮತ್ತು ಜ್ಯೋತಿ ಮೃತರು.

ಪಟ್ಟಣದ ಲಾಡ್ಜ್ ಒಂದರಲ್ಲಿ ಗುರುವಾರ ರಾತ್ರಿ ಜ್ಯೋತಿ ಮತ್ತು ಗೋವಿಂದ ರೆಡ್ಡಿ ತಂಗಿದ್ದು ಬೆಳಗ್ಗೆ ಒಂಬತ್ತು ಗಂಟೆಯ ಸಂದರ್ಭದಲ್ಲಿ ಪಟ್ಟಣದ ಹೊರವಲಯದ ಜಮೀನಲ್ಲಿ ಬಂಡೆಯ ಮೇಲೆ ಮದ್ಯಕ್ಕೆ ವಿಷವನ್ನು ಸೇರಿಸಿಕೊಂಡು ಕುಡಿದಿದ್ದಾರೆ ಜ್ಯೋತಿ 9.30ರ ಸಂದರ್ಭದಲ್ಲಿ ಸಾವನ್ನಪ್ಪಿದ್ದರೆ ಕೊನೆ ಉಸಿರಿನಲ್ಲಿದ್ದ ಗೋವಿಂದರೆಡ್ಡಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಪ್ರವಾನಿಸಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ 11ಕ್ಕೆ ಈತನ ಸಹ ಮೃತಪಟ್ಟಿದ್ದಾನೆ.

ಗೋವಿಂದ ರೆಡ್ಡಿಗೆ ಎರಡು ಮದುವೆಯಾಗಿದ್ದು ಜ್ಯೋತಿ ಮೊದಲನೇ ಹೆಂಡತಿ ಎಂದು ಹೇಳಲಾಗುತ್ತಿದೆ, ಈತನ 2ನೇ ಹೆಂಡತಿ ಲಕ್ಷ್ಮೀದೇವಿ ಎಂದು ತಿಳಿದು ಬಂದಿದೆ.ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net